ಕೈಕಂಬ: ಗಂಜಿಮಠ ಕೈಗಾರಿಕಾ ವಲಯದಲ್ಲಿರುವ ಬಿಗ್ ಬ್ಯಾಗ್ ಎಂಬ ಕಂಪನಿ ಲಾಕ್ ಡೌನ್ ಜಾರಿಯಲ್ಲಿರುವ ಸಂಧರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಣೆಗೆ ಮುಂದಾಗಿದ್ದು, ಇದರ ವಿರುದ್ದ ಸಾರ್ವಜನಿಕರು ದೂರು ನೀಡಿದ ನಂತರ ಅಧಿಕಾರಿಗಳು ಧಾವಿಸಿ ಲಾಕ್ ಡೌನ್ ತೆರವುಗೊಳ್ಳುವವರೆಗೆ ಕಂಪನಿಯ ಕಾರ್ಯಚಟುವಟಿಕೆಯನ್ನು ನಡೆಸದಂತೆ ತಡೆದಿದ್ದಾರೆ.342aa419-224f-44f5-8c09-b8aeb99dd6c3
ಈ ಕೈಗಾರಿಕೆಯಲ್ಲಿ ಸ್ಥಳೀಯರು ಮತ್ತು ಹೊರ ರಾಜ್ಯದವರು ಸೇರಿದಂತೆ ಅಂದಾಜು ಸುಮಾರು 3000 ಕಾರ್ಮಿಕರು ದುಡಿಯುತ್ತಿದ್ದಾರೆ, ಆಹಾರಧಾನ್ಯಗಳನ್ನು ಪ್ಯಾಕ್ ಮಾಡುವ ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದಿಸಿ, ವಿದೇಶಗಳಿಗೆ ರಫ್ತು ಮಾಡುವ ಕೈಗಾರಿಕೆಯಾಗಿದೆ.
ಶನಿವಾರ ಕಾರ್ಮಿಕರು ಕೆಲಸಕ್ಕಾಗಿ ಕಂಪನಿಗೆ ಆಗಮಿಸಿದ್ದು ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಕಂಪನಿಯ ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಮಟ್ಟದದ ಅಧಿಕಾರಿಗಳಿಗಳಿಗೆ ದೂರು ನೀಡಿದ್ದರು.  ಇದರಂತೆ ಸ್ಥಳಕ್ಕೆ ಧಾವಿಸಿದ ಗುರುಪುರ ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿಗಳು, ಗ್ರಾಮಕರಣಿಕರು ಕಂಪನಿ ಕಾರ್ಯನಿರ್ವಹಿಸುವುದನ್ನು ತಡೆದಿದ್ದಾರೆ.
 
ಅನುಮಾನ ಹುಟ್ಟಿಸಿದ ಅನುಮತಿ ಪತ್ರ:
ಈ ಮದ್ಯೆ  ಕಾರ್ಮಿಕರನ್ನು ಕರೆತರಲು ಕಂಪನಿಗೆ ಪೊಲೀಸರು ನೀಡಿರುವ ಅನುಮತಿ ಪತ್ರವೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು (ಕೋವಿಡ್ ಪಾಸ್) ಈ ಪಾಸ್ ಬಗ್ಗೆ  ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಾಕ್ ಡೌನ್ ವೇಳೆಯಲ್ಲಿ ಪೇಟೆಗೆ ಬಂದವರ ಮೇಲೆ ಲಾಠಿ ಬೀಸುವ ಪೊಲೀಸರು ಸಾವಿರಾರು ಕಾರ್ಮಿಕರನ್ನು ಕರೆತರಲು ಕಂಪನಿಗೆ ಯಾವ ಆಧಾರದಲ್ಲಿ ಪಾಸ್ ನೀಡಿದ್ದಾರೆ, ಒಬ್ಬೊಬ್ಬರಿಗೆ ಒಂದೊಂದು ಕಾನೂನೇ, ಲಾಕ್ ಡೌನ್ ನಿಯಮಗಳನ್ನು ಮುರಿದು 3000 ಜನ ಸೇರಲು ಪಾಸ್ ನೀಡಬಹುದಾದರೆ ಜಾತ್ರೆ, ಯಕ್ಷಗಾನಗಳಿಗೂ ಅನುಮತಿ ನೀಡಬಹುದಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *