ಕೈಕಂಬ: ಎಡಪದವು, ಮಿಜಾರು ಗಂಜಿಮಠ ಮತ್ತು ಮಳಲಿ ಪರಿಸರದಲ್ಲಿ ಆದಿತ್ಯವಾರ ಗುಡುಗು ಸಹಿತ ತುಂತುರು ಮಳೆ ಸುರಿದಿದೆ. ಮಧ್ಯಾಹ್ನ ಸುಮಾರು 4 ಗಂಟೆಗೆ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದ್ದು, ಮಿಜಾರು, ಕುಳವೂರು ಮತ್ತು ಕಲ್ಲಾಡಿ ಪರಿಸರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆದಿತ್ಯವಾರ ಬಿಸಿಲಿನ ತಾಪವು ಹೆಚ್ಚಾಗಿದ್ದು, ತುಂತುರು ಮಳೆ ಸುರಿದ ಪರಿಣಾಮ ಸೆಕೆ ಇನ್ನಷ್ಟು ಹೆಚ್ಚಾಗಿದೆ. 