ಕುಪ್ಪೆಪದವು: ನೊವೆಲ್ ಕೊರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ, ಜನರು ಮನೆಗಳಿಂದ ಹೊರಬರದಂತೆ ತಡೆಯಲು ಹಾಕಿರುವ ಲಾಕ್ ಡೌನ್ ನಡುವೆಯೇ ಪಂಚಾಯತ್ ಸದಸ್ಯರೊಬ್ಬರು ಜನರನ್ನು ತನ್ನ ಮನೆಗೆ ಕರೆಸಿ ದಿನಸಿಯನ್ನು ವಿತರಿಸುವ ಮೂಲಕ ಲಾಕ್ ಡೌನ್ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. 20200414_091557 (1)

ಲಾಕ್ ಡೌನ್ ವೇಳೆಯಲ್ಲಿ ಸಂಕಷ್ಟಕ್ಕೀಡಾದವರಿಗೆ ಅಗತ್ಯ ದಿನಸಿ ವಸ್ತುಗಳನ್ನು ಸಂಘ ಸಂಸ್ಥೆಗಳು, ಮುಖಂಡರುಗಳು ಮನೆ ಮನೆಗೆ ತಲುಪಿಸುತ್ತಿದ್ದರೆ,ಕಾಂಗ್ರೆಸ್ ಮುಂದಾಳು,  ಕುಪ್ಪೆಪದವು ಪಂಚಾಯತ್ ನ ಸದಸ್ಯರೋರ್ವರು ಕಲ್ಲಾಡಿಯ ತನ್ನ ಮನೆಗೆ ಜನರನ್ನು ಕರೆಸಿ ದಿನಸಿಗಳನ್ನು ಸೋಮವಾರ ವಿತರಿಸಿದ್ದಾರೆ. ಇಂದಿನ ಪರಿಸ್ಥಿಯಲ್ಲಿ ಬಡವರು ಅಗತ್ಯವಿದ್ದರೆ ನನ್ನ ಮನೆಗೆ ಬಂದು ಸಾಮಾಗ್ರಿ ಪಡೆದುಕೊಳ್ಳಲಿ ಎಂಬ ಭಾವನೆಯೋ ಅಥವಾ ಅವರವರ ಮನೆಗೆ ತಲುಪಿಸಿದರೆ ಎಲ್ಲಿ ತನ್ನ ಪ್ರತಿಷ್ಠೆ ಕಡಿಮೆಯಾಗುತ್ತದೋ ಎಂದು ಈ ರೀತಿ ಬಡಜನತೆಯನ್ನು ಹಿಂದೆ ಅರಸರುಗಳು ಅರಮನೆಗೆ ಕರೆಸಿಕೊಂಡಂತೆ ತನ್ನ ಕಾಲಬುಡಕ್ಕೆ ಕರೆಸಿ ದಿನಸಿ ವಿತರಿಸಿದ್ದು ಸರಿಯೇ ಮತ್ತು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದಂತೆ ಅಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಸಂಕಷ್ಟದ ಪರಿಸ್ಥಿಯಲ್ಲಿ ದಿನಸಿ ದೊರೆಯುತ್ತದೆ ಎಂಬ ಆಸೆ ಯಿಂದ ಜನರು ಅವರ ಮನೆಗೆ ಧಾವಿಸಿದ್ದಾರೆ, ಆದರೆ ಪಂಚಾಯತ್ ಸದಸ್ಯನಾಗಿ ಜವಾಬ್ದಾರಿ ಮರೆತು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು ಎಷ್ಟು ಸರಿ.?

By suddi9

Leave a Reply

Your email address will not be published. Required fields are marked *