ಬಂಟ್ವಾಳ : ಅದಿದ್ರಾವಿಡ ಮಹಾಮಂಡಲದ ಜತೆಕಾರ್ಯದರ್ಶಿ ರಾಜಪಲ್ಲಮಜಲು ಅವರ ನಿವಾಸದಲ್ಲಿ ಮಂಗಳವಾರ  ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 129 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

IMG-20200414-WA0042 ಪುರಸಭಾ ಸದಸ್ಯ,ದಲಿತ ಮುಖಂಡ ಜನಾರ್ದನ ಚಂಡ್ತಿಮಾರ್ ಅವರು ದೀಪ ಬೆಳಗಿಸಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ  ರಾಜ ಪಲ್ಲಮಜಲು ಅವರ ಕುಟುಂಬದ ಸದಸ್ಯರು,ದಲಿತಮುಖಂಡ ಸತೀಶ್ ಅರಳ ,ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಪರಿಸರದ ಬಡಕುಟುಂಬಗಳಿಗೆ ದಿನಬಳಕೆ ವಸ್ತುಗಳ ಕಿಟ್ ನ್ನು ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *