ಬಂಟ್ವಾಳ : ಅದಿದ್ರಾವಿಡ ಮಹಾಮಂಡಲದ ಜತೆಕಾರ್ಯದರ್ಶಿ ರಾಜಪಲ್ಲಮಜಲು ಅವರ ನಿವಾಸದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 129 ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಪುರಸಭಾ ಸದಸ್ಯ,ದಲಿತ ಮುಖಂಡ ಜನಾರ್ದನ ಚಂಡ್ತಿಮಾರ್ ಅವರು ದೀಪ ಬೆಳಗಿಸಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ಶುಭಹಾರೈಸಿದರು. ಈ ಸಂದರ್ಭದಲ್ಲಿ ರಾಜ ಪಲ್ಲಮಜಲು ಅವರ ಕುಟುಂಬದ ಸದಸ್ಯರು,ದಲಿತಮುಖಂಡ ಸತೀಶ್ ಅರಳ ,ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಇದೇ ವೇಳೆ ಪರಿಸರದ ಬಡಕುಟುಂಬಗಳಿಗೆ ದಿನಬಳಕೆ ವಸ್ತುಗಳ ಕಿಟ್ ನ್ನು ವಿತರಿಸಲಾಯಿತು.