ಉಡುಪಿ : ರೆಡ್ ಕ್ರಾಸ್ ಉಡುಪಿ ಕರೋನಾ ವಾರಿಯಸ್೯ ತಂಡ ಮತ್ತು ಕೆ.ಎಂ.ಸಿ ಮಣಿಪಾಲ ರಕ್ತನಿಧಿ ಇದರ ಆಶ್ರಯದಲ್ಲಿ ಎ.22 ರಂದು ರೆಡ್ ಕ್ರಾಸ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾಯ೯ಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುoಬ ಕಲ್ಯಾಣಾಧಿಕಾರಿ ಡಾII ಸುಧೀರ್ ಚಂದ್ರ ಸೂಡ ಮಾತನಾಡಿ ಕರೋನಾ ಸಮಯದಲ್ಲಿ ರಕ್ತದ ಕೊರತೆಯಿದೆ ಈ ನಿಟ್ಟಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಅಭಿನಂದನೀಯ ಎಂದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ವಹಿಸಿದ್ದರು.ವೇದಿಕೆಯಲ್ಲಿ ಡಾII ಅಶೋಕ್ ಕುಮಾರ್ ವೈ.ಜಿ, ಡಾII ಉಮೇಶ್ ಪ್ರಭು, ಬಾಲಕೃಷ್ಣ ಶೆಟ್ಟಿ’ ಮಹಮ್ಮದ್ ಮಾವ್ಲಾ ,ಪದಾಧಿಕಾರಿಗಳು ಉಪಸ್ಥಿತರಿದ್ದರು.