ಬಂಟ್ವಾಳ: ಕೊರೋನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ 78 ರ ವೃದ್ದೆಯ ಶವ ಸಂಸ್ಕಾರಕ್ಕೆ ಮಂಗಳೂರಿನ ವಿವಿದೆಡೆ ಮತ್ತು ಮೃತರ ಮನೆಗೆ 200 ಮೀ.ದೂರ ಇರುವ ಬಂಟ್ವಾಳ ಬಡ್ಡಕಟ್ಟೆಯ ಹಿಂದೂ ರುದ್ರಭೂಮಿಯಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೊನೆಗೂ ಜಿಲ್ಲಾಡಳಿತ ಬಿ.ಸಿ.ರೋಡಿನ ಕೈಕುಂಜ ಹಿಂದು ರುದ್ರಭೂಮಿಯಲ್ಲಿ ನಡುರಾತ್ರಿ ಸುಮಾರು 2 ಗಂಟೆಯ ವೇಳೆಗೆ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 
ದ.ಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರೇ ಖುದ್ದು ಮುಂದೆ ನಿಂತು ಬಂಟ್ವಾಳ ನಗರ ಪೋಲಿಸರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯಂತೆ ವೃದ್ದೆಯ ಶವಸಂಸ್ಕಾರ ನೆರವೇರಿಸಲಾಯಿತು.
ಮೃತ ವೃದ್ದೆ ತಮ್ಮ ಕುಟುಂಬದ ಸದಸ್ಯೆಯೆಂದೆ ಭಾವಿಸಿದ ಪೋಲಿಸರು ಶವಸಂಸ್ಕಾರಕ್ಕೆ ಬೇಕಾಗುವ ಸೌದೆ , ತುಪ್ಪ ಮುಂತಾದ ಸಾಮಾಗ್ರಿಗಳನ್ನು ಸ್ವತಃ ತರಿಸಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನೆರೆವೇರಿಸಿ ಪಣ್ಯ ಕಟ್ಟಿಕೊಂಡರು. ಪೋಲಿಸರ ಈ ಮಹತ್ಕಾರ್ಯಕ್ಕೆ ವ್ಯಾಪಕ ಶ್ಲಾಘನೆ,ಅಭಿನಂದನೆ ವ್ಯಕ್ತವಾಗಿದೆ.
ಇಲ್ಲು ವಿರೋಧ:
ಕೈಕುಂಜ ಪರಿಸರದ ನಾಗರಿಕರು ಕೂಡ ನಡುರಾತ್ರಿ ಸ್ಮಶಾನದ ಬಳಿ ಜಮಾಯಿಸಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಜಿಲ್ಲಾಡಳಿತ ಶವಸಂಸ್ಕಾರಕ್ಕೆ ಪೂರ್ಣಾಧಿಕಾರ ನೀಡಿದ್ದರಿಂದ ಜನರನ್ನು ಕೊನೆಗೂ ಮನವೊಲಿಸಿ ಪೋಲಿಸ್ ಅಧಿಕಾರಿಗಳು ಶವಸಂಸ್ಕಾರ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡ್ಡಕಟ್ಟೆಯಲ್ಲು ವಿರೋಧ:
ವಿಶೇಷವೆಂದರೆ ಮೃತ ವೃದ್ದೆಯ ನಿವಾಸದಿಂದ ಸುಮಾರು 200 ಮೀ.ದೂರದ ಬಡ್ಡಕಟ್ಟೆಯಲ್ಲಿ ರುದ್ರಭೂಮಿ ಇದೆ.ಮಧ್ಯರಾತ್ರಿ ಮೃತದೇಹವನ್ನು ಇಲ್ಲಿಗೆ ತರಲಾಗುತ್ತಿದೆ ಎಂಬ ವದಂತಿಯ ಹಿನ್ನಲೆಯಲ್ಲಿ ಇಲ್ಲಿ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಪೋಲಿಸರಿಗೆ ನೆನಪಿಗೆ ಬಂದದ್ದು ಬಿ.ಸಿ.ರೋಡಿನ ಕೈಕುಂಜದ ರುದ್ರ ಭೂಮಿ ಲ್ಲಿಯೇ ಪೋಲಿಸರೇ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ನಿಟ್ಟುಸಿರು ಬಿಟ್ಟರು.