ಬಂಟ್ವಾಳ: ಗುರುವಾರ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ ಹಿರಿಯ ಮಹಿಳೆಯ ಮೃತದೇಹದ ಅಂತ್ಯಕ್ರಿಯೆ ನಡೆಸುವಲ್ಲಿ ಗೊಂದಲ ಸೃಷ್ಠಿಸಿದ್ದು ವಿಷಾಧನೀಯವಾಗಿದೆ.
ಅಂತ್ಯಕ್ರಿಯೆ ನಡೆಸಲು ತಡೆವೊಡ್ಡಿ ಶವವನ್ನು ಅಲ್ಲಿಂದಿಲ್ಲಿಗೆ ಅಲೆದಾಡಿಸುವಂತೆ ಮಾಡುವ ಕೃತ್ಯವು ತೀರಾ ಅಮಾನವೀಯವಾಗಿದೆ.
ಮೃತದೇಹವನ್ನು ಗೌರವಯುತವಾಗಿ ಶವ ಸಂಸ್ಕಾರ ನಡೆಸುವ ಸಂಸ್ಕ್ರತಿಗೆ ವಿರುದ್ಧವಾಗಿ ಮೃತದೇಹಕ್ಕೆ ಅಗೌರವ ತೋರುವುದು ಯಾರೇ ವ್ಯಕ್ತಿಗೂ ಶೋಭೆಯಲ್ಲ.ಮುಂದಿನ ದಿನಗಳಲ್ಲಿ ಜಿಲ್ಲಾ ಆಡಳಿತವು ಕೋರೊನಾ ವೈರಸ್ ನಿಂದ ಮರಣ ಹೊಂದಿದ ವರನ್ನು ಯಾವ ಜಾಗದಲ್ಲಿ ಮತ್ತು ಯಾವ ರೀತಿಯಾಗಿ ಅಂತ್ಯ ಕ್ರಿಯೆ ನೆರವೇರಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ತೀರ್ಮಾನಿಸಬೇಕು. ಯಾಕೆಂದರೆ ಬಂಟ್ವಾಳದ ನಿವಾಸಿಯಾಗಿರುವ ಮಹಿಳೆಗೆ ಬಂಟ್ವಾಳದ ಸ್ಮಶಾನದಲ್ಲೂ ಅಂತ್ಯಕ್ರಿಯೆಗೆ ಅವಕಾಶ ಸಿಗದಿರುವುದು ಅಘಾತಕಾರಿ ವಿಚಾರವೇ ಆಗಿದೆ.
ಮೃತರ ಕುಟುಂಬದವರು ದುಃಖದಲ್ಲಿ ಇರುವಾಗ ಹೆಣವನ್ನು ಸ್ಮಶಾನದ ದಿಂದ ಸ್ಮಶಾನಕ್ಕೆ ಅಲೆದಾ ಡಿಸಿದ್ದು ಮಾನವ ಕುಲವೇ ತಲೆ ತಗ್ಗಿಸುವಂತ ವಿಚಾರವಾಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಇರುವ ಜನ ಪ್ರತಿನಿಧಿಗಳು ಸಮಿತಿಗೆ ಸೀಮಿತವಾಗದೆ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ, ಮುಖ್ಯವಾಗಿ ಮೃತದೇಹದ ಗೌರವಯುತ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕಾಗಿದೆ