ವಿಜಯಪುರ : ಕ್ರೂರಿ ಕರೋನಾ ವೈರಸನಿಂದದಾಗಿ ರಾಜ್ಯದ ಸುಮಾರು ಕಾರ್ಮಿಕ ಕೆಲಸಮಾಡುವವರು ಜೀವನ ತುಂಬಾ ಕಷ್ಟಕರವಾಗಿದೆ. ಎಷ್ಟೋ ಕಾರ್ಮಿಕರಿಗೆ ಇಲಾಖೆಯಿಂದ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಎಸ್ ಬಂಡಿ ಇನ್ಫ್ರಾ ಪ್ರೈ.ಲಿ. ನಿರ್ದೇಶಕ ಡಾ. ಅರ್ಜುನ ಬಂಡಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು ರಾಜ್ಯದ ಕಾರ್ಮಿಕರು ಲೋಕೋಪಯೋಗಿ ಕೆಲಸಗಳನ್ನು ಮಾಡುತ್ತ ತಮ್ಮ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಲಾಕ್ ಡೌನ್ ನಿಂದಾಗಿ ಸಾಕಷ್ಟು ಕಸ್ಟ್ ಅನುಭವಿಸುವಂತಾಗಿದೆ. ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಕಾರ್ಮಿಕರ ಮೇಲೆ ಗಮನ ಹರಿಸಬೇಕು. ಅಂದೆ ದುಡಿದು ಅಂದೆ ತಿನ್ನುವ ತಿನ್ನುವಂತಹ ಕಾರ್ಮಿಕ ಸಮುದಾಯವು ಈ ಮಹಾಮಾರಿ ಕರೋನಾ ವೈರಸನಿಂದಾಗಿ ಎಲ್ಲ ಕೆಲಸಗಳು ಸೀಲ್ ಡೌನ ನಿಂದಾಗಿ ಎಲ್ಲ ಕೆಲಸ ಕಾರ್ಯಗಳು ಬಂದ ಆಗಿ ಕಾರ್ಮಿಕರ ಪಾಡು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದೆ ರೀತಿ ಗ್ರಾಮೀಣ ಬಾಗದಲ್ಲೂ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ .
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರನ್ನು ಮೇಲೆತ್ತಲು ಸರಕಾರ ಈ ಕೂಡಲೆ ಕಟ್ಟಡ ಕೆಲಸಕ್ಕೆ ಅಗತ್ಯವಿರುವ ವಸ್ತುಗಳನ್ನು ಪೊರೈಕೆಗೆ ಅನುಮತಿ ನೀಡಿ ಮತ್ತು ರಾಜ್ಯದ ಎಲ್ಲ ಕಾರ್ಮಿಕರಿಗೂ ಕೆಲಸಕ್ಕೆ ಹೋಗಲು ಅನುಮತಿ (ಪಾಸ್) ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ರಾಜ್ಯ ಎಲ್ಲ ಕಾರ್ಮಿಕರ ಪರವಾಗಿ ಸರಕಾರಕ್ಕೆ ಒತ್ತಾಯಿಸುತ್ತೇನೆ