ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಿರ್ಮಾಣವಾದ ರೋಟರಿ ಸಾಧನ ಹಾಲ್ ನ ಉದ್ಘಾಟನಾ ಕಾರ್ಯಕ್ರಮ ಬಿ.ಸಿ.ರೋಡಿನ ಸಾಧನ ರೆಸಿಡೆನ್ಸಿಯಲ್ಲಿ ಶುಕ್ರವಾರ ನಡೆಯಿತು.ರೋಟರಿಯ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಅವರು ಉದ್ಘಾಟಿಸಿ ಶುಭ ಹಾರೈಸಿದರು.

14-58-20-IMG-20200619-WA0006-1-768x432

ರೋಟರಿ ಟೌನ್ ಅಧ್ಯಕ್ಷ ರೋ.ಪಿಎಚ್ ಎಫ್ ಜಯರಾಜ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.ರೋಟರಿ ವಲಯ 4ರ ಅಸಿಸ್ಟಂಟ್ ಗವರ್ನರ್ ರಿತೇಶ್ ಬಾಳಿಗಾ,ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ,ರೋಟರಿ ಟೌನ್ ನ ನಿಯೋಜಿತ ಅಧ್ಯಕ್ಷ ಪದ್ಮನಾಭ ರೈ,ನಿಯೋಜಿತ ಕಾರ್ಯದರ್ಶಿ ರೋ.ಕಿಶೋರ್ ವೇದಿಕೆಯಲ್ಲಿದ್ದರು. ಸಾಧನ ಹಾಲ್ ನ್ನು ರೋಟರಿ ಟೌನ್ ಗೆ ಉಚಿತವಾಗಿ ನೀಡಿದ ಸಾಧನ ರೆಸಿಡೆನ್ಸಿ ಮಾಲಕ ವಿಶ್ವನಾಥ್  ಸಾಲಿಯಾನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು ರೋಟರಿ ಟೌನ್ ಕಾರ್ಯದರ್ಶಿ ಪಲ್ಲವಿ ಕಾರಂತ ವಂದಿಸಿದರು.ರೋ.ವಿಂದ್ಯಾ ಎಸ್ ರೈ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *