ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಿರ್ಮಾಣವಾದ ರೋಟರಿ ಸಾಧನ ಹಾಲ್ ನ ಉದ್ಘಾಟನಾ ಕಾರ್ಯಕ್ರಮ ಬಿ.ಸಿ.ರೋಡಿನ ಸಾಧನ ರೆಸಿಡೆನ್ಸಿಯಲ್ಲಿ ಶುಕ್ರವಾರ ನಡೆಯಿತು.ರೋಟರಿಯ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ರೋಟರಿ ಟೌನ್ ಅಧ್ಯಕ್ಷ ರೋ.ಪಿಎಚ್ ಎಫ್ ಜಯರಾಜ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು.ರೋಟರಿ ವಲಯ 4ರ ಅಸಿಸ್ಟಂಟ್ ಗವರ್ನರ್ ರಿತೇಶ್ ಬಾಳಿಗಾ,ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ,ರೋಟರಿ ಟೌನ್ ನ ನಿಯೋಜಿತ ಅಧ್ಯಕ್ಷ ಪದ್ಮನಾಭ ರೈ,ನಿಯೋಜಿತ ಕಾರ್ಯದರ್ಶಿ ರೋ.ಕಿಶೋರ್ ವೇದಿಕೆಯಲ್ಲಿದ್ದರು. ಸಾಧನ ಹಾಲ್ ನ್ನು ರೋಟರಿ ಟೌನ್ ಗೆ ಉಚಿತವಾಗಿ ನೀಡಿದ ಸಾಧನ ರೆಸಿಡೆನ್ಸಿ ಮಾಲಕ ವಿಶ್ವನಾಥ್ ಸಾಲಿಯಾನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು ರೋಟರಿ ಟೌನ್ ಕಾರ್ಯದರ್ಶಿ ಪಲ್ಲವಿ ಕಾರಂತ ವಂದಿಸಿದರು.ರೋ.ವಿಂದ್ಯಾ ಎಸ್ ರೈ ನಿರೂಪಿಸಿದರು.
