ಕೈಕಂಬ : ಕರ್ನಾಟಕ ರಾಜ್ಯ ಸರಕಾರ ಜಿಲ್ಲೆಯ ಬಿಜೆಪಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ಬೆಂಗಳೂರಿನ ಇಲೆಕ್ಟ್ರಾನಿಕ್ ಮಾಧ್ಯಮವೊಂದು ತರಾತುರಿಯಲ್ಲಿ ಅಂತಹ ಸುದ್ದಿ ಪ್ರಕಟಿಸಿತ್ತು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಸ್ಪಷ್ಟಪಡಿಸಿದರು.
ಜೂ. 22ರಂದು ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಗುರುಪುರ ಶ್ರೀ ಜಂಗಮ ಮಠದ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು. ಈ ರಸ್ತೆಯ ಉಳಿದ ಭಾಗ ಕಾಂಕ್ರೀಟೀಕರಣಕ್ಕೆ ಪುನಾ 20 ಲಕ್ಷ ರೂ ತೆಗೆದಿರಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು. ಗುರುಪುರ ಬಿಜೆಪಿ ಕಾರ್ಯಕರ್ತರು ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅಥಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಸೇಸಮ್ಮ, ಮುಖಂಡರಾದ ವಿಷ್ಣು ಕಾಮತ್, ನಳಿನಿ ಶೆಟ್ಟಿ, ಶ್ರೀಕರ ಶೆಟ್ಟಿ, ಸೋಮಯ್ಯ, ಸಚಿನ್ ಶೆಟ್ಟಿ, ವಿನಯ ಸುವರ್ಣ, ರಾಜೇಶ್ ಶೆಟ್ಟಿ, ಹರೀಶ್ ಬಳ್ಳಿ, ಸುನಿಲ್ ಪೂಜಾರಿ ನಡುಗುಡ್ಡೆ, ಜಿ ಕೆ ನರಸಿಂಹ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.