ಕೈಕಂಬ : ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಮುರನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವು ಮನೆಯೊಳಗೆ ನೀರು ತುಂಬಿದೆ. ಮುರನಗರದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಗೋಪಾಲ ಬೆಲ್ಚಡ, ಕವಿತಾ ಎಂ, ಸುನಂದಾ, ಸೇಸಮ್ಮ, ಸೀತಮ್ಮ, ಭಾಸ್ಕ ಮೂಲ್ಯ, ಸುಲೋಚನಾ ಮನೆಯೊಳಗೆ ಹತ್ತಿರದ ಪವರ್ ಹೌಸ್-ಸಾಯಿಧಾಮ ಕಟ್ಟಡದ ಕಡೆಯಿಂದ ಮಳೆ ಹಾಗೂ ಚರಂಡಿ ನೀರಿಂದ ಕೃತಕ ನೆರೆ ಸೃಷ್ಟಿಯಾಗಿದ್ದು, ಕಳೆದ ರಾತ್ರಿ(ಸೆ. 20) ಮನೆಮಂದಿಗೆ ಗೃಹ ಬಂಧನವಾಗಿತ್ತು. ರಾತ್ರಿ ಹೊತ್ತಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿ, ಪರಿಹಾರ ಕ್ರಮಕ್ಕೆ ವಿಫಲ ಪ್ರಯತ್ನ ನಡೆಸಿದ್ದಾರೆ. ಸಮಾಜಸೇವಕರಾದ ಎಂ ಕೆ ಅಶ್ರಫ್, ಮುಹಮ್ಮದ್ ಸಾಲಿ ಮತ್ತವರ ಸಂಗಡಿಗರು ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ಹೇಳಿದರು.gur-sep-20-bande kusitha-2

“ಪವರ್ ಹೌಸ್ ಬಳಿಯಿಂದ ಸರಿಯಾದ ತೋಡಿನ ವ್ಯವಸ್ಥೆ ಇಲ್ಲದೆ ಮಳೆ ನೀರು ವಸತಿ ಪ್ರದೇಶದಲ್ಲಿ ತುಂಬುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಕೆಲವು ಮನೆಗಳು ಕುಸಿದು ಬೀಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ” ಎಂದು ವಿಜಯಾ ಜಿ ಸುವರ್ಣ ಹೇಳಿದರು.gur-sep-20-kruthaka nere-2

ಕೊಳಂಬೆ ಗ್ರಾಮದ ಕೊಪ್ಪಲದಲ್ಲಿ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ಯಮುನಾ ಪೂಜಾರ್ತಿ ಎಂಬವರ ಮನೆ ಆವರಣ ಗೋಡೆ ಪಕ್ಕದ ಗುಲಾಬಿ ಎಂಬವರ ಮನೆಯ ಹಿಂಭಾಗಕ್ಕೆ ಬಿದ್ದು, ಮನೆ ಗೋಡೆ ಸಂಪೂರ್ಣ ಕುಸಿದಿದೆ. ಎರಡೂ ಮನೆಗೆ 25 ಲಕ್ಷ ರೂ ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಕೊಳಂಬೆ ಜಿಪಂ ಸರ್ಕಾರಿ ಶಾಲೆಗೆ ಗುಲಾಬಿ ಕುಟುಂಬ ಸ್ಥಳಾಂತರಗೊಳಿಸಲಾಗಿದೆ.gur-sep-20-kolambe mane-3

ಇಲ್ಲಿನ ಮಹಾಬಲ ಬೆಲ್ಚಡ ಎಂಬವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಕೆಳಗಿನ ಮನೆ(ಮೋನಪ್ಪ ಪೂಜಾರಿ) ಅಂಗಳಕ್ಕೆ ಬಿದ್ದಿದೆ. ಇವೆರಡು ಮನೆಗಳಿಗೂ 20 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.gur-sep-20-kolambe mane-2

ಅಪಾಯ ಸಂಭವಿಸಿರುವ ಮನೆಗಳಿಗೆ ಗುರುಪುರ ನಾಡ ಕಚೇರಿ ಉಪ-ತಹಶೀಲ್ದಾರ್ ಶಿವಪ್ರಸಾದ್, ಗ್ರಾಮ ಲೆಕ್ಕಿಗ ಯುಮುನಪ್ಪ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಮುಖಂಡರಾದ ಶಿವಶಂಕರ್, ಕವಿತಾ, ದೇವೇಂದ್ರ, ಅಡ್ವಕೇಟ್ ವಿನೋದರ ಪೂಜಾರಿ ಮತ್ತಿತರರು ಭೇಟಿ ನೀಡಿದರು.

“ಅಪಾಯದಲ್ಲಿರುವ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುವ ಹಾಗೂ ಪರಿಹಾರದ ಬಗ್ಗೆ ವರದಿಯೊಂದಿಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು. ಇಲ್ಲಿನ ಕೆಲವು ಮನೆ ಅಪಾಯದಲ್ಲಿವೆ” ಎಂದು ಉಪ-ತಹಶಿಲ್ದಾರ್ ಶಿವಪ್ರಸಾದ್ ತಿಳಿಸಿದರು.

By suddi9

Leave a Reply

Your email address will not be published. Required fields are marked *