ಕೈಕಂಬ: ಬಂಟ್ವಾಳವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಆದೇಶದ ಮೇರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ಅ.13ರಂದು ಮಂಗಳವಾರ ಕರಿಯಂಗಳ ಗ್ರಾಮ ಪಂಚಾಯತಿ ವಠಾರದಲ್ಲಿ ಪ್ರತಿಭಟನೆ ನಡೆಸಿ ಪಂಚಾಯತ್ ಅಭಿವೃದ್ಧಿಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕರಿಯಂಗಳ ವಲಯಾಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ, ದ.ಕ.ಜಿಲ್ಲಾ ಕಾರ್ಯದರ್ಶಿ ಉಮೇಶ್ ಆಚಾರ್ಯ ಕರಿಯಂಗಳ, ಬಂಟ್ವಾಳ ಮಹಿಳಾ ಮೋರ್ಚಾ ಅದ್ಯಕ್ಷೆ ವೀಣಾ ಯು. ಆಚಾರ್ಯ, ಬಂಟ್ವಾಳ ವಲಯ ಕಾಂಗ್ರೇಸ್ ಕಾರ್ಯದರ್ಶಿ ಬಸೀರ್,ಬಂಟ್ವಾಳ ಕಿಶನ್ ಘಟಕದ ಅದ್ಯಕ್ಷ ರಾಜು ಕೋಟ್ಯಾನ್,ಬಂಟ್ವಾಳ ಯುವ ಕಾಂಗ್ರೇಸ್ ಅದ್ಯಕ್ಷ ಇಬ್ರಾಹಿಂ ನವಾಜ್ ಬಡಕಬೈಲು, ಪ್ರಸಾಂತ್ ವಿಮಲಕೋಡಿ, ಪ್ರೇಮ್ನಾಥ್ ಚೇರ ಮತ್ತು ಕರಿಯಂಗಳ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.