ಕೋಲಾರ: ಮುಖಂಡರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಪಕ್ಷ ಬೆಳೆಸೋಣ, ಇಲ್ಲಿ 10 ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ತುಂಬಬೇಕು ಇದಕ್ಕಾಗಿ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವಹಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.10kolar2

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಪಂ ಚುನಾವಣೆ ಸಂಬಂಧ ಬುಧವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿ, ಈಗಾಗಲೇ ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮೈಸೂರು ಪಕ್ಷ ಸಂಘಟನೆ ಮಾಡಲು ನಿಖಿಲ್‍ಗೆಸೂಚಿಸಲಾಗಿದೆ. ಎಲ್ಲರ ಇಚ್ಚೆಯಂತೆ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ನಮ್ಮಲಿನ ವ್ಯತ್ಯಾಸಗಳಿಂದ ಪಕ್ಷದಲ್ಲಿ ಲೋಪಗಳು ಕಂಡು ಬಂದಿವೆ. ಇವೆಲ್ಲವನ್ನೂ ಸರಿಪಡಿಸಿ, ಕನಿಷ್ಠ 10 ಸ್ಥಾನಗಳನ್ನಾದರೂ ಜೆಡಿಎಸ್ ತೆಕ್ಕೆಗೆ ಪಡೆದುಕೊಳ್ಳಲಾಗುವುದಾಗಿ ಹೇಳಿದರು.

ಮುಖ್ಯಮಂತ್ರಿಯಾಗಿದ್ದಾಗ ನನ್ನ ಆಡಳಿತ ಅವಧಿಯಲ್ಲಿ ಯಾರಿಗೂ ಮೋಸ ಮಾಡಿಲ್ಲ. ಇತಿ ಮಿತಿಗಳಲ್ಲಿ ಕೆಲಸ ಮಾಡಬೇಕಿತ್ತು, ಜಿಲ್ಲೆಗೆ ಯಾರನ್ನೇ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕಾದರೆ ಕಾಂಗ್ರೆಸ್ ನಾಯಕರು ಸೂಚಿಸಿದ ವ್ಯಕ್ತಿಯನ್ನು ನಿಯೋಜನೆ ಮಾಡಬೇಕಿತ್ತು. ನಾನು ಹೆಸರಿಗಷ್ಟೇ ಸಿಎಂ ಆಗಿದ್ದೆ ಎಂದರು.ನನಗೆ ಬಜೆಟ್ ಮಂಡನೆ ಮಾಡಲೂ ಸಿದ್ದರಾಮಯ್ಯ ಅವಕಾಶ ಕೊಡಲಿಲ್ಲ, ಒಂದು ಕಡೆ ಯಡಿಯೂರಪ್ಪ ಸಾಲ ಮನ್ನಾ ಯಾವಾಗ ಎಂದು ಪ್ರಶ್ನಿಸುತ್ತಿದ್ದರು ಎಂದು ಸ್ಮರಿಸಿದರು. ದೇಶದ ಇತಿಹಾಸದಲ್ಲಿ ರಾಜ್ಯ ಸರ್ಕಾರವೊಂದು 25000 ಕೋಟಿರೂ ಸಾಲ ಮನ್ನಾ ಮಾಡಿದ್ದು ಐತಿಹಾಸಿಕ. ಆದರೆ ಪಕ್ಷದ ಕಾರ್ಯಕರ್ತನಿಗೆ ನಿಗಮ, ಮಂಡಳಿ ಅಧ್ಯಕ್ಣ ಸ್ಥಾನ ಕೊಡಲು ಆಗಲಿಲ್ಲ. ಪಾಪದ ಕೆಲಸ ಮಾಡೊದು ಬೇಡ ಅಂತ ಹೊರಗೆ ಬಂದಿದ್ದೇನೆ ಎಂದು ತಿಳಿಸಿದರು.

ಗ್ರಾ.ಪಂಚುನಾವಣೆಯಲ್ಲಿ ಪಕ್ಷಕ್ಕೆ ಬಲ ನೀಡಿ ಗ್ರಾಪಂ ಚುನಾವಣೆ ನಡೆಯುತ್ತಿದೆ, ಗ್ರಾಮ ಸ್ವರೂಪ ಉದ್ದೇಶವೇ ಬದಲಾವಣೆಯಾಗಿದೆ. ದೇವಾಲಯ ನಿರ್ಮಾಣಕ್ಕೆ ಹಣ ನೀಡುವವರನ್ನು ಅವಿರೋಧ ಆಯ್ಕೆ ಮಾಡಿಕೊಳ್ಳೊದು ಉತ್ತಮ ಬೆಳವಣಿಗೆಯಲ್ಲ, ಜಿಲ್ಲೆಯ ಅತಿ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್ ಅಧಿಕಾರಕ್ಕೇರಲು ಶಕ್ತಿ ಮೀರಿ ಶ್ರಮಿಸಿ ಎಂದರು.ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಬಹುಮತ ಪಡೆಯುವುದು ನನ್ನ ಕೊನೆ ಆಸೆಯಾಗಿದ್ದು, ತಾ.ಪಂ, ಜಿ.ಪಂನಲ್ಲಿ ಚುನಾವಣೆಯಲ್ಲಿ ಬಹುಮತಪಡೆಯಬೇಕು. ಕಾಂಗ್ರೆಸ್‍ನವರು ಜೆಡಿಎಸ್‍ಗೆ ಮತ ಕೊಡಬೇಡಿ, ಅದು ಬಿಜೆಪಿ ಬಿ ಟೀಂ ಅಂತ ಹೇಳುವುದು ವಾಡಿಕೆ ಮಾಡಿಕೊಂಡಿದ್ದು, ಮುಂದೆ ಕಾಂಗ್ರೆಸ್ ಪಕ್ಷವು ರಾಜ್ಯವಲ್ಲ, ಇಡೀ ದೇಶದಲ್ಲೆ ಮತ್ತೆ ಬರಲು ಸಾಧ್ಯವಿಲ್ಲ. ನಾನು ಬಿಜೆಪಿ, ಕಾಂಗ್ರೆಸ್ ಪಕ್ಷದ ಗುಲಾಮನಲ್ಲ ಎಂದು ಕಿಡಿಕಾರಿದರು.

ಸಭೆಯಲ್ಲಿ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್‍ಕುಮಾರಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‍ಸಿ ಗೋವಿಂದರಾಜು, ಜೆಡಿಎಸ್ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಜಿಪಂ ಸದಸ್ಯ ಕೆ.ಎಸ್.ನಂಜುಂಡಪ್ಪ, ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ, ಮುಖಂಡರಾದ ಸಿಎಂಆರ್ ಶ್ರೀನಾಥ್, ಮಲ್ಲೇಶ್‍ಬಾಬು, ಕುರ್ಕಿ ರಾಜೇಶ್ವರಿ,ಜಿ.ನರೇಶ್‍ಬಾಬು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *