ಕೋಲಾರ: ಕುಮಾರಣ್ಣ ಹಿಟ್ ಅಂಡ್ ರನ್ ರಾಜಕಾರಣಿಯಲ್ಲ. ಏನೋ ಮಾತನಾಡಿ ಎಸ್ಕೇಪ್ ಆಗಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ನಗರದಲ್ಲಿ ಜೆಡಿಎಸ್ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಕೆಲ ರೈತ ಸಂಘದ ಮುಖಂಡರು ಕುಮಾರಸ್ವಾಮಿ ರೈತ ವಿರೋಧಿ ಎಂದು ಬಿಂಬಿಸಿದ್ದಾರೆ, ಇದು ಸರಿಯಲ್ಲ. ಕುಮಾರಸ್ವಾಮಿ ರೈತರಿಗೆ ನೀಡಿರುವ ಕೊಡುಗೆಯು ನಿಜವಾದ ರೈತರಿಗೆ ಗೊತ್ತಿದೆ ಎಂದರು.ಕಾಂಗ್ರೆಸ್ ಪಕ್ಷದ ಜತೆ ಸ್ನೇಹ ಮಾಡಿ, ನೋವು ಅನುಭವಿಸಿದ್ದಾರೆ. ಜೆಡಿಎಸ್ಯಾವ ಪಕ್ಷದ ಬಾಗಿಲಿಗೆ ಹೋಗಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳವರುನಮ್ಮ ಬಾಗಲಿಗೆ ಬಂದು ಸರಕಾರ ರಚನೆ ಮಾಡಿ ಎಂದು ಗೋಗರೆದರು.ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡುವ ಮೂಲಕ ನಂಬಿಕೆ ಉಳಿಸಿಕೊಂಡಿದ್ದಾರೆ. ನಾವು ಸಾಮಾಜಿಕ ಮಾಧ್ಯಮದಲ್ಲಿ ವೀಕ್ ಇದ್ದೇವೆ ಎಲ್ಲವನ್ನೂ ಸರಿಪಡಿಸೋಣ ಎಂದರು.
ಗ್ರಾಪಂ ಚುನಾವಣೆ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಹೀಗಾಗಿ ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಕೆಲಸ ಮಾಡಬೇಕು. ನಾನು ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ, ವರಿಷ್ಠರ ಬಳಿ ಹೇಳಿಕೊಳ್ಳಲು ಆಗದ ವಿಚಾರಗಳು ನನ್ನ ಗಮಕ್ಕೆ ತರಬೇಕು, ಕುಟುಂಬ ಸದಸ್ಯನ್ನಾಗಿ ಪಕ್ಷ ಸಂಘಟನೆ ಮಾಡುತ್ತೇನೆಎಂದ ಅವರು, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು. ಜೆಡಿಎಸ್ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ, ಕೆಸಿವ್ಯಾಲಿ ಯೋಜನೆಯನ್ನು ನಾನು ತಂದಿದ್ದು, ನಾನು ತಂದಿದ್ದು ಎಂದು ಅನೇಕರು ಹೇಳಿಕೊಳ್ಳುತ್ತಾರೆ. ಆದರೆ ಯೋಜನೆಗೆ ಹಣ ಬಿಡುಗಡೆ ಮಾಡಿದ
ಕುಮಾರಸ್ವಾಮಿಯವರ ಹೆಸರು ಯಾರೂ ಹೇಳುತ್ತಿಲ್ಲ. ಡಿ.ಕೆ.ರವಿ ಹೆಸರು ಹೇಳಿದರೂ ಕೆಲವರು ಏನೇನೊ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷಕ್ಕೆ ಗಿಮಿಕ್ ರಾಜಕಾರಣ ಗೊತ್ತಿರಲಿಲ್ಲ. ಅದನ್ನು ಕಲಿತಿದ್ದರೆ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಿದ್ದರು. ಕಾಂಗ್ರೆಸ್, ಬಿಜೆಪಿಯವರು ಜೆಡಿಎಸ್ಅನ್ನು ಬಳಸಿಕೊಂಡಿದ್ದಾರೆ ಹೀಗಾಗಿ ನಾವು ಅವರಿಂದ ಪಾಠ ಕಲಿಯಬೇಕಿಲ್ಲ. ಕಾಂಗ್ರೆಸ್ನ ಒಳಸಂಚಿನಿಂದ ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಅಸಮಧಾನವ್ಯಕ್ತಪಡಿಸಿದರು.ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜೆಡಿಎಸ್ಗೆ ಕಾರ್ಯಕರ್ತರ ಪಡೆಯಿದ್ದು, ನಿಖಿಲ್ ಕುಮಾರಸ್ವಾಮಿ ಬಂದರೆ 10 ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು.ಸಭೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್ಸಿ ಗೋವಿಂದರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಮತ್ತಿತರರಿದ್ದರು.