ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಜಲ್ಲಿಗುಡ್ಡೆಯಲ್ಲಿ ಜಿಲ್ಲಾ ಪಂಚಾಯತ್ನ ೧೦ ಲಕ್ಷ ರೂ ಹಾಗೂ ತಾಲೂಕು ಪಂಚಾಯತ್ನ ಎರಡು ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಪೈಪ್ಲೈನ್ ಕಾಮಗಾರಿಗೆ ಭಾನುವಾರ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಶಂಕುಸ್ಥಾಪನೆಗೈದರು.
೫೦,೦೦೦ ಲೀಟರ್ ನೀರು ಸಾಮರ್ಥ್ಯದ ಈ ಟ್ಯಾಂಕ್ನಿಂದ ಗ್ರಾಮದ ಬಡಕರೆ, ನಡುಗುಡ್ಡೆ, ಕೊಟ್ಟಾರಿಗುಡ್ಡೆ, ಮಠದಬೈಲು ಪ್ರದೇಶದ ೨೫೦ಕ್ಕೂ ಹೆಚ್ಚು ಮನೆಗಳಿಗೆ ನೀರು ಪೂರೈಕೆಯಾಗಲಿದ್ದು, ಇದು ಈ ಭಾಗದ ಬಹುದಿನಗಳ ಕನಸಾಗಿತ್ತು ಎಂದು ಜಿಪಂ ಸದಸ್ಯರು ಹೇಳಿದರು.
ಸಮಾರಂಭದಲ್ಲಿ ವ್ಯಾಪ್ತಿ ಪ್ರದೇಶದ ನೂತನ ಸದಸ್ಯರಾದ ಸದಾಶಿವ ಶೆಟ್ಟಿ ಕೆ, ಶೋಭಾ ಎ, ಸಂಪಾ ಹಾಗೂ ತಾಪಂ ಮಾಜಿ ಸದಸ್ಯ ಹಾಗೂ ಗುರುಪುರ ಗ್ರಾಪಂ ನೂತನ ಸದಸ್ಯ ಸಚಿನ್ ಅಡಪ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದ ಗುರುಪುರ ಗ್ರಾಪಂ ನೂತನ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಜಿ ಎಂ ಉದಯ ಭಟ್ ವಂದಿಸಿದರು.