ಕೈಕಂಬ : ಕೆಲವು ಕಡೆ ತೆಂಗಿನ ಗಿಡಗಳಿಗೆ ಕಾಂಡ ಕೊರೆಯುವ ಹುಳು ಬಾಧೆ ಹೆಚ್ಚಿದ್ದು, ಪೊಳಲಿಗೆ ಸಮೀಪದ ಗ್ರಾಮಗಳಲ್ಲಿ ಈ ರೋಗ ಹೆಚ್ಚಾಗಿದೆ. ಇದರಿಂದ ಈ ಭಾಗದ ತೋಟ ಬೆಳೆಗಾರರು ಕಂಗಾಲಾಗಿದ್ದಾರೆ.8d910d53-dc15-4a34-8309-80c197bca3b3

ಪೊಳಲಿಗೆ ಸಮೀಪದ ಮಣಿಕಂಠಪುರ ಹಾಗೂ ಹತ್ತಿರದ ಕೆಲವು ಮನೆಯವರು ಎರಡು ಮೂರು ವರ್ಷದ ಹಿಂದೆ ನೆಟ್ಟಿರುವ ತೆಂಗಿನ ಸಸಿಗಳು, ಫಲ ನೀಡುವ ಹಂತದಲ್ಲಿ ಬುಡದಿಂದಲೇ ಕುಸಿದು ಬೀಳುತ್ತಿವೆ. ಜಾಗ ಬದಲಿಸಿ ಸಸಿ ನೆಟ್ಟಾಗಲೂ ಇಲ್ಲಿ ಇದೇ ಸಮಸ್ಯೆ ಎದುರಾಗುತ್ತಿದೆ ಎಂದು ಕೆಲವರು ಹೇಳಿದ್ದಾರೆ.64aedeee-81af-439f-8418-9bc467539906

“ನನ್ನ ಮನೆ ವಠಾರ ಹಾಗೂ ತೋಟದಲ್ಲಿ ಸಾಕಷ್ಟು ಕೀಟನಾಶಕ ಬಳಸಿ ಮುಂಜಾಗ್ರತೆಯಿದ ಬೆಳೆಸಲಾದ ಕೆಲವು ತೆಂಗಿನ ಗಿಡಗಳು ಫಲ ಬರುವ ಹೊತ್ತಿಗೆ ಕಾಂಡ ಕೊರೆಯುವ ಹುಳುವಿನ ಬಾಧೆಗೆ ತುತ್ತಾಗಿವೆ. ಕಾಂಡದಲ್ಲಿ ತುಂಬಿರುವ ಬಿಳಿ ಹುಳುಗಳು ತೆಂಗಿನ ಬೇರುಗಳನ್ನೇ ತಿಂದು ಬಿಡುತ್ತಿವೆ. ಇದರಿಂದ ಬೆಳೆ ನಷ್ಟವಾಗುತ್ತಿದೆ” ಎಂದು ಶುಭಾವತಿ ವಿ. ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *