ಕೈಕಂಬ : ಗುರುಪುರ ಕಾರಮೊಗರುಗುತ್ತಿನ ನಿವಾಸಿ, ವಿವಿ ಕಬ್ಬಡಿ ಆಟಗಾರ, ಪ್ರಗತಿಪರ ಹಾಗೂ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಿ ಕೆ ಕಿಟ್ಟಣ್ಣ ರೈ ಮಂಗಳವಾರ ಬೆಳಿಗ್ಗೆ ರಕ್ತದೊತ್ತಡ ಮತ್ತು ಹೃದಯಾಘಾತದಿಂದ ನಿಧನ ಹೊಂದಿದರು.WhatsApp Image 2021-08-10 at 3.51.41 PMಗುರುಪುರ ಹಾಗೂ ಸುತ್ತಲ ಪ್ರದೇಶಗಳಲ್ಲಿ ಅತ್ಯಂತ ಜನಪ್ರಿಯರಾಗಿರುವ ಇವರು ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಕಬ್ಬಡಿ ಆಟಗಾರರಾಗಿ ಚಿರಪರಿಚಿತರು. ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದ ರೈ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ಗಳಿಸಿರುವ ಇವರು ಕೃಷಿಕರಾಗಿದ್ದರು. ರೈತ ಸಂಘಟನೆಯಲ್ಲಿ ಸ್ಥಳೀಯ ನಾಯಕರಾಗಿದ್ದರು. ಗುರುಪುರ ಸೇತುವೆ ಹೋರಾಟ ಸಮಿತಿಯ ಮುಂಚೂಣಿಯಲ್ಲಿದ್ದರು. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *