ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತವು ಸುಮಾರು ೫೦,೦೦೦ ಮೌಲ್ಯದ ಕಂಪ್ಯೂಟರ್ ದೇಣಿಗೆಯಾಗಿ ನೀಡಿತು.gur-aug-18-computer-1ಬ್ಯಾಂಕ್‌ನ ಸಭಾಗೃಹದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿಯವರು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ನಿರ್ದೇಶಕರಾದ ಸಚಿನ್ ಅಡಪ, ಜಿ ಎಂ ಉದಯ ಭಟ್, ನಳಿನಿ ಶೆಟ್ಟಿ ಕಿಶೋರ್ ಬೊಂಡಂತಿಲ, ಬ್ಯಾಂಕ್ ಮ್ಯಾನೇಜರ್ ನಾಗರಾಜ್ ಭಟ್, ಗುರುಪುರ ಪಂಚಾಯತ್ ಸದಸ್ಯ ಹರೀಶ್ ಬಳ್ಳಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಕೇಶವ ಪೂಜಾರಿ ಸ್ವಾಗತಿಸಿ, ವಂದಿಸಿದರು.gur-aug-18-computer-3

By suddi9

Leave a Reply

Your email address will not be published. Required fields are marked *