ಮುಂಬಯಿ : ಸಾಂತಾಕ್ರೂಜ್ ನ ಹಿರಿಯ ಸಮಾಜ ಸೇವಕ ಶೇಖರ ಸಾಲಿಯಾನ್ ಇವರ ಸತತ ಪ್ರಯತ್ನದಿಂದ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಯೋಗ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಕೊರೋನಾ ಸಂಕಷ್ಟದ ಲಾಕ್‌ಡೌನ್ ಸಮಯದಲ್ಲಿ ವಸತಿ ವ್ಯವಸ್ಥೆಯಿಲ್ಲದ ನಿರ್ಗತಿಕ ಮತ್ತು ಕಡು ಬಡಜನರಿಗೆ ದೈನಂದಿನವಾಗಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ (ಬಿಎಂಸಿ) ಮೂಲಕ ಆಹಾರ ಪೂರೈಸಿ ಅನುಪಮ ಸೇವೆಗೈದ ಶೇಖರ ಜೆ.ಸಾಲಿಯಾನ್ ಅವರನ್ನು ಬಿಎಂಸಿ ಹೆಚ್-ಈಸ್ಟ್ ವಾರ್ಡ್ನ ಸಹಾಯಕ ಆಯುಕ್ತೆ ಅಲ್ಕಾ ಸಸಾನೆ ಮತ್ತು ಮಾಜಿ ಬಿಎಂಸಿ ಮಾಜಿ ಮಹಾಪೌರ ಸ್ಥಾನೀಯ ನಗರ ಸೇವಕ ಪ್ರಿನ್ಸಿಪಾಲ್ ವಿಶ್ವನಾಥ ಮಹಾಧೇಶ್ವರ್ ಇವರು ಪ್ರಶಂಸಾಪತ್ರ ಪ್ರದಾನಿಸಿ ಹೂಗುಚ್ಛದೊಂದಿಗೆ ಗೌರವಿಸಿ ಅಭಿವಂದಿಸಿದರು.Shekar Salyan Santacruz 1ಕೋವಿಡ್ ಯುದ್ಧದಂತಹ ಸಾಂಕ್ರಾಮಿಕ ಸಮಯದಲ್ಲಿ ಇಂತಹ ಜನಹಿತ ಉತ್ತಮ ಕಾಯಕವನ್ನು ನಡೆಸಿ, ಅಸಹಾಯಕ ಜನತೆಯ ಸೇವೆ ಮಾಡಿದ್ದು ತಮ್ಮಂತಹ ಸಹೃದಯಿಗಳಿಂದ ಮತ್ತಷ್ಟು ಉತ್ತಮ ಸೇವಾಕಾರ್ಯ ಇನ್ನೂ ಚೆನ್ನಾಗಿ ನಡೆಯಲಿ. ನಾವು ಸಮಾಜಕ್ಕೆ ನೀಡಿದರೆ, ಸಮಾಜ ನಮಗೆ ವಿಶೇಷ ಗೌರವವಾಗಿ ವರ ಕೊಡಬಲ್ಲದು ಎಂದು ಆಯುಕ್ತೆ ಅಲ್ಕಾ ಸಸಾನೆ ಆಶಯ ವ್ಯಕ್ತಪಡಿಸಿದರು.

ಉಡುಪಿ ಉದ್ಯಾವರದ ಬೋಳಾರಗುಡೆ ಜಿಲ್ಲು ಪೂಜಾರಿ ಮತ್ತು ರಾಜೀವಿ ಸಾಲ್ಯಾನ್ ದಂಪತಿ ಸುಪುತ್ರರಾದ ಶೇಖರ್ ಸಾಲಿಯಾನ್ ಸಾಂತಕ್ರೂಜ್ ಪರಿಸರದ ಹಿರಿಯ ಸಮಾಜ ಸೇವಕರಾಗಿದ್ದು ಪ್ರಭಾತ್ ಕಾಲೋನಿ ಸಿಟಿಜನ್ ಅಸೋಸಿಯೇಶನ್ ಮತ್ತು ಪ್ರಭಾತ್ ಕಾಲೋನಿ ಗಣೇಶೋತ್ಸವ ಮಂಡಲ ಇದರ ಅಧ್ಯಕ್ಷ ಆಗಿರುವರು. ಪ್ರಭಾತ್ ಕಾಲೋನಿಯಲ್ಲಿನ ಪೇಜಾವರ ಮಠದ ಸೇವೆಗಳಲ್ಲೂ ತನ್ನನ್ನು ತೊಡಗಿಸಿ ಕೊಂಡಿದ್ದು ಸ್ಥಾನೀಯವಾಗಿ ಜನಾನುರೆಣಿಸಿದ್ದಾರೆ.

By suddi9

Leave a Reply

Your email address will not be published. Required fields are marked *