ಪೊಳಲಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಇದರ ಸಹಯೋಗದಲ್ಲಿ ಪಾನಮುಕ್ತರ ಪುನಶ್ಚೇತನ ಕೆ ನವಜೀವನ ಸಮಿತಿ ರಚಿಸಿ ಉದ್ಘಾಟಿಸಲಾಯಿತು . ಪೊಳಲಿ ರಾಮಕೃಷ್ಣ ತಪೋವನದ   ವಿವೇಕ ಚೈತನ್ಯಾನಂದ ಸ್ವಾಮಿ   ಉದ್ಘಾಟಿಸಿ ಆಶೀರ್ವದಿಸಿದರು.0043cfd8-1851-468d-b3f4-6ab5352f63c6

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ ಕೊಡಾಜೆ ಇವರು ಅಧ್ಯಕ್ಷತೆ ವಹಿಸಿ , ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಪಾನಮುಕ್ತರ ಸಂಘಟಿಸೋದು ಬಹುಮುಖ್ಯ , ಈ ನವಜೀವನ ಸಮಿತಿ ಮೂಲಕ ಗ್ರಾಮ ಮಟ್ಟದಲ್ಲಿ ಪಾನಮುಕ್ತ ಮನೆ,ಮನಸುಗಳು ನಿರ್ಮಾಣದ ಕನಸು ನನಸಾಗುತ್ತದೆ ಎಂದರು. ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳು ತಿಮ್ಮಯ್ಯ ನಾಯ್ಕ ರವರು ಭಾಗವಹಿಸಿ ನವಜೀವನ ಸಮಿತಿಯ ಪರಿಕಲ್ಪನೆ , ಪೂಜ್ಯರ ಆಶಯ , ನವಜೀವನ ಸದಸ್ಯರ ನವನಿರ್ಮಾಣ ದ ಕುರಿತು ಮಾರ್ಗದರ್ಶನ ನೀಡಿದರು .

ತಾಲೂಕು ಯೋಜನಾಧಿಕಾರಿಗಳು ಜಯಾನಂದ ರವರು ಶುಭ ಹಾರೈಸಿದರು ,ವೇದಿಕೆಯಲ್ಲಿ ಶಿಬಿರದ ಮಾಜಿ ಅದ್ಯಕ್ಷರು ವೆಂಕಟೇಶ ನಾವುಡ , ಶಿಬಿರಾಧಿಕಾರಿ ದೇವಿಪ್ರಸಾದ, ಮೇಲ್ವಿಚಾರಕರಾದ ಹರಿಣಾಕ್ಷಿ , ಸೇವಾ ಪ್ರತಿನಿಧಿಗಳು, ಒಕ್ಕೂಟದ ಅದ್ಯಕ್ಷರು, ಹಾಗೂ ನವಜೀವನ ಸದಸ್ಯರು ಹಾಜರಿದ್ದರು

By suddi9

Leave a Reply

Your email address will not be published. Required fields are marked *