ಬಂಟ್ವಾಳ : ಕಾನೂನಿನಿಂದ ಎಲ್ಲಾ ಸರಿಪಡಿಸುವುದು , ಕಟ್ಟುನಿಟ್ಟಿನ ನಿಯಮ ಮಾಡಿ ಅಪರಾಧ ಕಡಿಮೆ ಮಾಡಲು ಸಾಧ್ಯವಿಲ್ಲ . ನೈತಿಕತೆ ಮನುಷ್ಯನಲ್ಲಿ ಹೃದಯಾಂತರಾಳದಲ್ಲಿ ಬರಬೇಕು ಸಮಾಜದಲ್ಲಿ ವಾಸ ಮಾಡುವ ವ್ಯಕ್ತಿಗೆ ಭಯದ ಅಗತ್ಯವಿದೆ ಎಂದು ಗೌ/ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು ನುಡಿದರು . ಅವರು ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ಗೂಡಿನಬಳಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .
KAR_4444
ಸಂಪನ್ಮೂಲ ವ್ಯಕ್ತಿ ಪ್ರಸಾದ್ ಕುಮಾರ್ ರೈ ಮಾಧ್ಯಮಗಳಿಂದಾಗುವ ತೊಂದರೆ ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯ (ಪೋಕ್ಸೊ ಆ್ಯಕ್ಟ್ 2012) ಕಾಯ್ದೆ ಬಗ್ಗೆ ಮಾಹಿತಿ ನೀಡಿದರು . ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ತಹಶೀಲ್ದಾರ್ ಮಲ್ಲೇಸ್ವಾಮಿ , ಸರಕಾರಿ ಅಭಿಯೋಜಕಿ ಅರ್ಚನಾ ಪ್ರಸಾದ್ , ನಗರ ಠಾಣಾ ನಿರೀಕ್ಷಕ ನಂದಕುಮಾರ್ ಉಪಸ್ಥಿತರಿದ್ದರು . ಶಿಕ್ಷಣ ಸಂಯೋಜಕಿ ರವಿಕಲಾ ವಂದಿಸಿ , ಶಿಕ್ಷಣ ಸಂಯೋಜಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು

By suddi9

Leave a Reply

Your email address will not be published. Required fields are marked *