ಬಂಟ್ವಾಳ; ಚರಂಡಿ ವಿವಾದಕ್ಕೆ ಸಂಬಂಧಿಸಿ ಗುಂಪುಗಳೆರಡು ಪುರಸಭಾ ಮುಖ್ಯಾಧಿಕಾರಿಯೆದುರೇ ಹೊಡೆದಾಡಿಕೊಂಡ ಘಟನೆ ನಂದರಬೆಟ್ಟು ವಾಡರ್್ ನಲ್ಲಿ ನಡೆದಿದೆ. ಇಲ್ಲಿನ ಚರಂಡಿ ಯೊಂದು ಕಳೆದ ಹಲವು ವರ್ಷಗಳಿಂದ ಬ್ಲಾಕ್ ಆಗಿದ್ದು, ಈ ಬಗ್ಗೆ ಸ್ಥಳೀಯರು ಪುರಸಭೆಗೆ ದೂರು ನೀಡಿದ್ದರು.

ಇದರ ಪರಿಶೀಲನೆಗೆ ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಬ್ಲಾಕ್ ಆಗಿರುವ ಚರಂಡಿಯನ್ನು ತೆರೆಸಿ ಕೊಡಬೇಕೆಂದು ಒಂದು ಗುಂಪು ಮನವಿ ಮಾಡಿದರೆ, ಇನ್ನೊಂದು ಗುಂಪು ಮತ್ತೊಂದು ಕಡೆಯಲ್ಲಿ ಚರಂಡಿ ನಿಮರ್ಿಸುವಂತೆ ಮನವಿ ಮಾಡಿತು. ಈ ಬಗ್ಗೆ ಮುಖ್ಯಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಂತೆಯೇ ಗುಂಪುಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಳ್ಳುವ ವರೆಗೂ ಮುಂದುವರಿಯಿತು. ಈ ವಾಡರ್್ ನ ಸದಸ್ಯರಾದ ಮಹಮ್ಮದ್ ನಂದರಬೆಟ್ಟು ರವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಪರಿಶೀಳನೆ ವೇಳೆ ಗೈರಾಗಿದ್ದರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯಾಧಿಕಾರಿಯವರು, ಇಲ್ಲಿನ ಸಮಸ್ಯೆಯನ್ನು ಸ್ಥಳೀಯ ಪುರಸಭಾ ಸದಸ್ಯರ ಗಮನಕ್ಕೆ ತಂದು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಹೊಡೆದಾಟದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ





