ಕೈಕಂಬ : ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್-೨೦೨೧ ಸ್ಪರ್ಧೆಯ ಪಾಯಿಂಟ್ ಫೈಟ್ ಮತ್ತು ಕಿಕ್ ಲೈಟ್ ವಿಭಾಗದಲ್ಲಿ ಗುರುಪುರದ ಜಿ ಆದಿತ್ಯ ಕಿರಣ್ ಎರಡು ಚಿನ್ನದ ಪದಕ ಗಳಿಸಿದ್ದಾರೆ.gur-nov-3-adithya kiranನೀರುಮಾರ್ಗ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿರುವ ಈತ ಮಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್‌ಐಕೆಎಂಎ(ಕರಾಟೆ ಮತ್ತು ಮಾರ್ಶಲ್ ಆರ್ಟ್ಸ್) ಸಂಸ್ಥೆಯಲ್ಲಿ ನಿತೀನ್ ಎನ್ ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ.

ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಡಬ್ಲೂö್ಯಯು.ಎಸ್‌.ಎಚ್‌.ಯುನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಹಲವು ಪ್ರಶಸ್ತಿ ಗಳಿಸಿರುವ ಈತ ಗುರುಪುರದ ಕಿರಣ್ ಕುಮಾರ್ ಮತ್ತು ಸಿ ಎಸ್ ಲೀಲಾವತಿ ದಂಪತಿ ಪುತ್ರರಾಗಿದ್ದಾನೆ.

By suddi9

Leave a Reply

Your email address will not be published. Required fields are marked *