ಬಂಟ್ವಾಳ:  ಮುತ್ತೂರು – ಮುಲಾರಪಟ್ಣ  ಪ್ರವೇಶಿಸುವ ಮುತ್ತೂರು ಸೇತುವೆ ಶುಭಾರಂಭ ವಾಗಲಿದೆ ನಾಲ್ಕು ವರ್ಷದ ಕನಸು ಇಂದು ನನಸಾಗಲಿದೆ  ಮೂಲರಪಟ್ಣ ಸೇತುವೆ ಕಾಮಗಾರಿ ಅಂತಿಮಗೊಂಡಿದ್ದು, ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.WhatsApp Image 2021-11-11 at 5.33.37 PM (1)

IMG-20211111-WA0006-e1636629248464ಮಂಗಳೂರು ಹಾಗೂ ಬಂಟ್ವಾಳ ತಾಲೂಕನ್ನು ಬೆಸೆಯುವ ಮೂಲರಪಟ್ಣ ಸೇತುವೆಯು 2018ರಲ್ಲಿ ಏಕಾಏಕಿ ಮಳೆಗೆ ಕುಸಿದಿದ್ದು, ಎರಡೂ ಭಾಗದ ಸಂಪರ್ಕ ಕೊಂಡಿ ಕಡಿತಗೊಂಡಿತ್ತು. ಸೇತುವೆ ಇಲ್ಲದೆ ಈ ಭಾಗದ ಬಸ್ಸು ಸಂಪರ್ಕ, ವಾಹನ ಸಂಚಾರ ಕಡಿತಗೊಂಡು ಸಾರ್ವಜನಿಕರು ಸಾಕಷ್ಟು ತೊಂದರೆಗೊಳಗಾಗಿದ್ದರು. ಸುಮಾರು 13 ಕೋ.ರೂ.ವೆಚ್ಚದ ಈ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು ಇಂದಿನಿಂದ ಸಂಚಾರಕ್ಕೆ ಅವಕಾಶ ನೀಡಲಾಗಿದೆ. WhatsApp-Image-2021-11-11-at-5.19.30-PM-300x139

 ಮೂಲರಪಟ್ಣ ಸೇತುವೆ ಬಿದ್ದ ಬಳಿಕ ತೂಗು ಸೇತುವೆಯ ಮೂಲಕ ಜನ ಸಾಗುತ್ತಿದ್ದರು. ಆದರೆ ವಾಹನಗಳು ಸುತ್ತು ಬಳಸಿ ಸಾಗಬೇಕಿತ್ತು. ಹಳೆ ಸೇತುವೆ ಬಿದ್ದ ಬಳಿಕವೂ ಹಲವು ಸಮಯಗಳವರೆಗೆ ಅದರ ಅವಶೇಷಗಳು ಹಾಗೇ ಉಳಿದುಕೊಂಡಿತ್ತು. ಬಳಿಕ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅದರ ಅವಶೇಷ ತೆರವುಗೊಂಡಿತ್ತು. ಬೇಸಗೆಯಲ್ಲಿ ನದಿಯ ಮಧ್ಯದಲ್ಲಿ ಮಣ್ಣು ತುಂಬಿಸಿ ರಸ್ತೆ ಮಾಡಲಾಗುತ್ತಿದ್ದು, ಲಘು ವಾಹನಗಳು ಸಂಚಾರ ನಡೆಸುತ್ತಿದ್ದವು. ಆದರೆ ಮಳೆ ಆರಂಭವಾಗಿ ನದಿಯಲ್ಲಿ ನೀರು ಬಂದಾಗ ರಸ್ತೆ ಕೊಚ್ಚಿ ಹೋಗುತ್ತಿತ್ತು. ಆದರೆ ಇದೀಗ ಸೇತುವೆಯ ಕಾಮಗಾರಿ ಮುಕ್ತಾಯವಾಗಿದೆ.

WhatsApp-Image-2021-11-11-at-5.19.31-PM-300x139ಹೊರ ಜಿಲ್ಲೆ, ಹೊರ ರಾಜ್ಯದ ಕಂಪೆನಿಗಳಾದರೆ ಒಂದು ಸಣ್ಣ ಬದಲಾವಣೆ ಇದ್ದರೂ, ಅಲ್ಲಿಂದಲೇ ಸಂಬಂಧಪಟ್ಟವರು ಆಗಮಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ ಸ್ಥಳೀಯ ಕಂಪೆನಿಗಳಾದಾಗ ಅಂತಹ ತೊಂದರೆ ಇರುವುದಿಲ್ಲ.  ಸೇತುವೆಯ ಗುತ್ತಿಗೆ ನಿರ್ವಹಣೆಯ ಕಾಮಗಾರಿಯನ್ನು ಸ್ಥಳೀಯ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್ ಕಂಪೆನಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ವೇಗವಾಗಿ ಸಾಗಿ ಜನರಿಗೆ ಅನುಕೂಲವಾಗುವಂತೆ ಸಂಚಾರಕ್ಕೆ ಮುಕ್ತವಾಗಿದೆ. WhatsApp-Image-2021-11-11-at-5.19.32-PM-300x139

ಶಾಸಕದ್ವಯರ ತೀರ್ಮಾನ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರ: ನ.17 ರಂದು ಬುಧವಾರ ಮೂಲರಪಟ್ನ‌ ಸೇತುವೆ ಲೋಕಾರ್ಪಣೆಗೆ ದಿನ ನಿಗದಿಯಾಗಿದ್ದು , ರಾಜ್ಯ ಲೋಕಪಯೋಗಿ ಸಚಿವ ಪಾಟೀಲ್ ಅವರು ಈ ಸೇತುವೆಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಲಿದ್ದರು. ಆದರೆ ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮೂಲರಪಟ್ನ ಸೇತುವೆ ಉದ್ಘಾಟನೆ ಕಾರ್ಯಕ್ರಮ ವನ್ನು ರದ್ದು ಮಾಡಲಾಗಿದೆ.WhatsApp-Image-2021-11-11-at-5.19.34-PM-300x139

By suddi9

Leave a Reply

Your email address will not be published. Required fields are marked *