ಪೊಳಲಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಹಡೀಲು ಬಿದ್ದ ಗದ್ದೆಗಳನ್ನು ಬೇಸಾಯ ಮಾಡಿ ಹೆಚ್ಚಿನ ಪ್ರಮಾಣದ ಭತ್ತದ ಕೃಷಿಯನ್ನು ಬೆಳೆಸಲಾಗಿದೆ. ಪೊಳಲಿ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಹಿಂದಿನಿದಲು ಸ್ಥಳೀಯರೇ ಸೇರಿ ಬೇಸಾಯ ಮಾಡುತ್ತಿದ್ದು, ಈ ಬಾರಿ ಕೃಷಿ ಇಲಾಖೆಯಿಂದ ಯಂತ್ರೋಪಕರಣದ ಮೂಲಕ ಭತ್ತ ಬೆಳೆಯಲಾಗಿದೆ. ಉತ್ತಮ ಫಸಲು ಕೂಡ ಬಂದಿದ್ದು, ಕೃಷಿ ಯಾವತ್ತೂ ನಷ್ಟವನ್ನುಂಟು ಮಾಡುವುದಿಲ್ಲ ಎಂಬುದಕ್ಕೆ ಇಲ್ಲಿ ಬೆಳೆದ ಭತ್ತ ಬೇಸಾಯವೇ ಉದಾಹರಣೆಯಾಗಿದೆ. ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.15vp nati 02

ಅವರು ಮಂಗಳವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ಬಂಟ್ವಾಳ ಕೃಷಿ ಇಲಾಖೆಯ ವತಿಯಿಂದ ಮಾಡಲಾದ ಭತ್ತ ಬೇಸಾಯದ ಕಟಾವು ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.15vp nati 3

ಕೇಂದ್ರ ಸರಕಾರವು ೧೯೬೦ ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ನ. ೧೫ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ರೈತರು ನೋಂದಣಿ ಮಾಡಿಕೊಂಡು ನಿಗದಿತ ಕೇಂದ್ರಗಳಿಗೆ ಭತ್ತವನ್ನು ನೀಡಬಹುದಾಗಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ.ಈ ಬಾರಿ ಹೆಚ್ಚಿನ ಭತ್ತದ ಬೇಸಾಯವಾದ ಕಾರಣ ಕೆಲವೊಂದು ತೊಂದರೆಗಳು ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅದು ನಿವಾರಣೆಯಾಗಲಿದೆ ಎಂದರು.ಪೊಳಲಿ ಕ್ಷೇತ್ರದ ಅನಂತಪದ್ಮನಾಭ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.15vp batha nati 2

15vp 01ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ,ನಾಗೇಶ್ ರಾವ್ ಪೊಳಲಿ, ತಾ.ಪಂ. ಮಾಜಿ ಸದಸ್ಯ ಯಶವಂತ ಪೊಳಲಿ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಪೊಳಲಿ ಸೇವಾ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ವಿಜಯ ರವಿ ಫೆರ್ನಾಡಿಸ್, ಉಪಾಧ್ಯಕ್ಷ ವೆಂಕಟೇಶ ನಾವಡ, ಗುರುಪುರ ಗ್ರಾ.ಪಂ.ಸದಸ್ಯ ಸಚಿನ್ ಅಡಪ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಪೊಳಲಿ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ಭಟ್, ಅಮ್ಮುಂಜೆ ಗ್ರಾ.ಪಂ.ಸದಸ್ಯ ಕಾರ್ತಿಕ್ ಬಳ್ಳಾಲ್, ಪ್ರಮುಖರಾದ ಸುಕೇಶ್ ಚೌಟ, ಮಂಗಳಾ ಇಲೆಕ್ಟಿçಕಲ್ಷ್ ಭಾಸ್ಕರ್ ಭಟ್, ಸುಬ್ರಾಯ ಕಾರಂತ, ಭಾಸ್ಕರ ಭಟ್, ಕಿಶೋರ್ ಪಲ್ಲಿಪಾಡಿ,ವಿಷ್ಣುಮೂರ್ತಿ ಭಟ್, ಯಶೋಧರ ಕಲ್ಕುಟ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *