ಕೈಕಂಬ : ಶಾರಾದಾ ಸಮೂಹ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಮೂಡುಶೆಡ್ಡೆಯ ಶುಭೋದಯ ವಿದ್ಯಾಲಯದಲ್ಲಿ ಶಾಲೆ, ಶಾಲಾ ಮಕ್ಕಳು ಮತ್ತು ಪೋಷಕರ ಶ್ರೇಯೋಭಿವೃದ್ಧಿ ಸಹಿತ ಲೋಕ ಕಲ್ಯಾಣಾರ್ಥವಾಗಿ ಶುಕ್ರವಾರ ಗೋಧೂಳಿ ಲಗ್ನದಲ್ಲಿ ಗೋಪೂಜೆ ಮತ್ತು ದುರ್ಗಾ ನಮಸ್ಕಾರ ಪೂಜೆ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್ ಪುತ್ರ, ನಿರ್ದೇಶಕ ಶಮೀರ ಪುರಾಣಿಕ್ ಮತ್ತು ಶ್ರೀಮತಿ ಪುರಾಣಿಕ್ ಪೂಜೆಯಲ್ಲಿ ಪಾಲು ಪಡೆದಿದ್ದರು. ಶಾಲಾ ಪಾಲಕ-ಶಿಕ್ಷಕ ಸಂಘದ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಹಾಗೂ ಶಾಲಾ ಉಪ-ಪ್ರಾಂಶುಪಾಲ ಗೋಪಾಲಕೃಷ್ಣ ಭಟ್ ಪೂಜೆಯ ಮುಂದಾಳತ್ವ ವಹಿಸಿದ್ದರು.
ಬೊಂಡಂತಿಲ ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಸದಾಶಿವ ಉಪಾಧ್ಯಾಯ ಗುಡ್ಡೆಮನೆ(ತಿರುವೈಲು) ಪೂಜಾ ವಿಧಿ-ವಿಧಾನ ನಡೆಸಿಕೊಟ್ಟರು. ಪೂಜೆಯ ವೇಳೆ ಮಹಿಳೆಯರಿಂದ ಭಜನಾ ಸಂಕೀರ್ತನೆ ನಡೆಯಿತು.
ಶಾಸ್ರೋತ್ಕಕ್ತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಶ್ಯಾಮಲಾ ಯೋಗೀಶ್ ಮಟ್ಟ, ಸಂಸ್ಕೃತ ಶಿಕ್ಷಕ ರಾಜಾರಾಮ ಶರ್ಮ, ಕಚೇರಿ ಪ್ರಮುಖ ಚಂದ್ರಹಾಸ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ, ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮೂಡುಶೆಡ್ಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.