ಕೈಕಂಬ: ಕರ್ನಾಟಕದ ಉಚ್ಚನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡಿರುವ ಐ ತಾರನಾಥ ಪೂಜಾರಿ ಇರುವೈಲ್ ಅವರನ್ನು ಹಿತೈಷಿಗಳು ಸೋಮವಾರ ಸನ್ಮಾನಿಸಿದರು.
ಉದ್ಯಮಿಗಳಾದ ಚಂದ್ರಹಾಸ ಅಮೀನ್, ದಿನೇಶ್ ಶೆಟ್ಟಿ, ಸತೀಶ್ಚಂದ್ರ ಇರುವೈಲ್ ಪಾಣಿಲ, ಸದಾನಂದ ಪೂಜಾರಿ , ಉಪನಿರ್ದೇಶಕ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರಂಜನ ಹಾಗೂ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಟಿ. ಐ. ತಾರಾನಾಥ ಪೂಜಾರಿಯವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಾರಾನಾಥ ಪೂಜಾರಿ ಅವರ ಹಿತೈಷಿಗಳು, ಕುಟುಂಬಸ್ತರು ಉಪಸ್ಥಿತರಿದ್ದರು.
