ಕೈಕಂಬ : ಧರ್ಮದ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳದೆ, ಸತ್ಯಕ್ಕಾಗಿ ಹೋರಾಡುತ್ತಿರುವ ನೇರಾನೇರ ನುಡಿಯ ಶ್ರೀ ವಜ್ರದೇಹಿ ಕ್ಷೇತ್ರದ ಸ್ವಾಮೀಜಿಯವರ ಪ್ರೀತಿ ಮತ್ತು ಆತ್ಮೀಯತೆ ಮರೆಯುವಂತಿಲ್ಲ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.gur-may-15-sanmana  gur-may-15-swamy

ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ಮೇ. ೧೪ರಂದು ಶನಿವಾರ  ನಡೆದ ಶ್ರೀ ನರಸಿಂಹ ಜಯಂತಿ ಮಹೋತ್ಸವ’ ಅಂಗವಾಗಿ ಸಂಜೆ ವಜ್ರದೇಹಿ ಮಠದ ಆವರಣದಲ್ಲಿ ಆಯೋಜಿಸಲಾದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮೇಳದವರ(ಪಾವಂಜೆ) `ಧರ್ಮ ಸಿಂಹಾಸನ’ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಮೇಳದ ಮದ್ದಳೆಗಾರ ಬೊಳಿಂಜಡ್ಕ ಗುರುಪ್ರಸಾದ್, ಯಕ್ಷಗಾನ ಕಲಾವಿದ ಮದೂರು ರಾಧಾಕೃಷ್ಣ ನಾವಡ, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಎಂ ಎಸ್ ಹಾಗೂ ಕೃಷಿಕೆ ಶೋಭಾ ಶೆಟ್ಟಿ ಬಳ್ಕುಂಜೆ ಅವರಿಗೆ ಹಮ್ಮಿಕೊಂಡ ಸನ್ಮಾನ-ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.gur-may-15-patla gur-may-15-mahabaleshwar bhat

ಶ್ರೀ ಕ್ಷೇತ್ರ ವಜದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯವರು ಆಶೀರ್ವಚನ ನೀಡುತ್ತ, ಕಲಾಸೇವೆಗೆ ಕ್ಷೇತ್ರದಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ಯಕ್ಷಗಾನಕ್ಕೂ ನಮ್ಮ ಬದುಕಿಗೂ ಅವಿನಾಭಾವ ಸಂಬಂಧವಿದೆ. ಮೇಳದ ಯಕ್ಷ ಕಲಾಸೇವೆ ಇನ್ನಷ್ಟು ಬೆಳಗಲಿ ಎಂದರು.

ಮಹಾಬಲೇಶ್ವರ ಭಟ್ ಅವರಿಗೆ `ಧರ್ಮ ಸೇವಾ ರತ್ನ’, ಗುರುಪ್ರಸಾದ್ ಅವರಿಗೆ `ಯಕ್ಷ ವಜ್ರ ಮೃದಂಗ ಮಂದಾರ’ ಹಾಗೂ ರಾಧಾಕೃಷ್ಣ ನಾವಡರಿಗೆ `ವಜ್ರ ಕೌಮುದಿ’ ಬಿರುದು ನೀಡಿ ಸನ್ಮಾನಿಸಲಾಯಿತು.

ಶ್ಯಾಮ್ ಭಟ್ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿ ವಂದಿಸಿದರು. ಉದ್ಯಮಿ ರವೀಂದ್ರ ಶೆಟ್ಟಿ, ಪ್ರತಿಷ್ಠಾನದ ಪ್ರಮುಖ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *