ಬಂಟ್ವಾಳ : ಶಿಕ್ಷಣ ಕೇಂದ್ರಗಳ ಒಕ್ಕೂಟ ದ.ಕ., ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ, ಪಡಿ ಮಂಗಳೂರು, ಚೈಲ್ಡ್ ಲೈನ್ ದ.ಕ. ಮಂಗಳೂರು, ಕಾವಳಪಡೂರು ವಗ್ಗ ಸರಕಾರಿ ಪ.ಪೂ. ಕಾಲೇಜು ಪ್ರೌಢಶಾಲೆ ವಿಭಾಗ, ಕಾವಳಪಡೂರು ಗ್ರಾಮ ಪಂಚಾಯತ್, ಕಾವಳಪಡೂರು ಪ್ರಾ.ಕೃ.ಸ.ಸಂಘ ವಗ್ಗ, ಎಸ್.ಎಂ.ಚಾರಿಟೇಬಲ್ ಟ್ರಸ್ಟ್ ಬಿ.ಸಿ.ರೋಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಸೈಬರ್ ಅಪರಾಧ ಮತ್ತು ಮಕ್ಕಳ ರಕ್ಷಣೆ, ಅತಿಯಾದ ಮೊಬಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಬಗ್ಗೆ ಮಾಹಿತಿ ಕಾರ್ಯಕ್ರಮ ಕಾವಳಪಡೂಡು ಸ.ಪ್ರೌ.ಶಾಲಾ ಸಭಾಂಗಣದಲ್ಲಿ ಜೂ.ಗುರುವಾರ ನಡೆಯಿತು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿ ಕಚೇರಿಯ ತಾಲೂಕು ದೈಹಿಕ ಪರಿವೀಕ್ಷಣಾಽಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸೈಬರ್ ಕ್ರೈಮ್ ಕಾನೂನು ಬಗ್ಗೆ ಅರಿತಿರಬೇಕು. ಕಾನೂನಿನ ಅರಿವು ಉತ್ತಮ ಜೀವನಕ್ಕೆ ಸಹಕಾರಿ ಎಂದು ಹೇಳಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಭಾರತಿ,ಗುಣಪಾಲ್, ಚೈಲ್ಡ್ ಲೈನ್ ನಗರ ಸಂಯೋಜಕಿ ಲವಿಟಾ ಡಿಸೋಜ ಆವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಕಾವಳಪಡೂರು ಪ್ರಾ.ಕೃ.ಸ.ಸಂಘ ವಗ್ಗ ಇದರ ಅಧ್ಯಕ್ಷ ಪ್ರಮೋದ್ ಕುಮಾರ್ ರೈ,ಮಧ್ವ ಕ್ಲಸ್ಟರ್ ಸಿಆರ್ಪಿ ಜ್ಯೋತಿ, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷೆ ರಜನಿ, ಪಡಿ ಮಂಗಳೂರು ಜಿಲ್ಲಾ ಸಂಚಾಲಕಿ ಲಲಿತಾ ಶೆಟ್ಟಿ, ಬಂಟ್ವಾಳ ತಾ.ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ಶಾಲಾಭಿವೃದ್ಧಿ ಸಮಿತಿ ಸದಸ್ಯರು,ಶಿಕ್ಷಣ ಸಂಪನ್ಮೂಲ ಕೇಂದ್ರದ ಒಕ್ಕೂಟದ ಪದಾಽಕಾರಿಗಳು, ಪೋಷಕರು , ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂತರ್ಜಾಲ ದುಷ್ಪರಿಣಾಮಗಳ ಕುರಿತ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಶೇಖ್ ಆದಂ ಸಾಹೇಬ್ ಅವರು ಸ್ವಾಗತಿಸಿದರು. ಶಿಕ್ಷಣ ಕೇಂದ್ರಗಳ ಒಕ್ಕೂಟ ಉಪಾಧ್ಯಕ್ಷೆ ನಂದಾ ಪಾಸ್ ಪ್ರಸ್ತಾವಿಸಿದರು. ಆಶಾಲತಾ ಸುವರ್ಣ ವಂದಿಸಿದರು. ಹೆಲೆನ್ ಜ್ಯೂಲಿಯನ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು.