ಬಂಟ್ವಾಳ: ತಾಲೂಕು ಸೊರ್ನಾಡು ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲಾಡಳಿತ ಮಂಡಳಿ, ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್.,ಡಬ್ಲ್ಯು ವಿದ್ಯಾರ್ಥಿನಿಯರ ಸಹಕಾರದೊಂದಿಗೆ ಸಂತ ಅ್ಯಂಡ್ರೂಸ್ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ದಿನಾಚರಣೆ ಜರಗಿತು.
sornadu
ಶಾಲಾ ಸಂಚಾಲಕ ಫಾ|ಎಲ್ಯಾಸ್ ಡಿಸೋಜ ಅವರು ಮಾತನಾಡಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರು ನಿಸ್ವಾರ್ಥಿಯಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.  ದೇಶದ ಪ್ರಧಾನಿಯಾಗಿದ್ದರೂ ತಾನೊಬ್ಬ ಈ ದೇಶದ ಸಾಮಾನ್ಯ ಸೇವಕ ಎಂಬ ಚಿಂತನೆಯೊಂದಿಗೆ, ವೈಜ್ಞಾನಿಕವಾಗಿ ದೇಶದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯೋತ್ತರ ಭಾರತದ ಸಮಗ್ರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಮಕ್ಕಳನ್ನು ಪ್ರೀತಿಯಿಂದ ಕಂಡ ನೆಹರೂ ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುವುದು ಎಂದು ಹೇಳಿದರು. ಲೊರೆಟ್ಟೊ-ಅಗ್ರಾರ್ ಲಯನ್ಸ್ ಕ್ಲಬ್ನ ಅಧ್ಯಕ್ಷ  ಕ್ಲಿಪರ್ಡ್  ಡಿಸೋಜ, ಕಾರ್ಯದರ್ಶಿ ಮರ್ಲಿನ್ ಮಾರ್ಟಿಸ್ , ಲಯನ್ಸ್ ವಲಯಾಧ್ಯಕ್ಷೆ ಆಶಾ ಫೆರ್ನಾಂಡಿಸ್, ಲೊರೆಟ್ಟೊ ಪಾಲನಾ ಮಂಡಳಿ ಉಪಾಧ್ಯಕ್ಷ ರಿಚ್ಚಾರ್ಡ್ ಮಿನೇಜಸ್, ಕಾರ್ಯದರ್ಶಿ ಐರಿನ್ ಡಿಸೋಜ, ಬೆಥನಿ ಸಹೋದಯ ಸಂಸ್ಥೆಯ ಸಮಾಜ ಕಾರ್ಯಕರ್ತೆ  ಲತಾ,  ಶಾಲಾ ಗೌರವ ಶಿಕ್ಷಕಿಯರು, ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು , ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಸ್ಪರ್ದಾ  ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಲಯನ್ಸ್ ಕ್ಲಬ್ನ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಬಳಿಕ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಶಾಲಾ ನಿಯೋಜಿತ ಮುಖ್ಯಶಿಕ್ಷಕಿ ಜೋಸಿನ್ ರೋಡ್ರಿಗಸ್ ಅವರು ಸ್ವಾಗತಿಸಿದರು. ಕು|ಚೈತ್ರಾ ವಂದಿಸಿದರು. ಕು|ಕೃಪಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *