ಬಂಟ್ಕಾಳ: ಕಾರ್ಕಳದಲ್ಲಿ ನಡೆದ ಜೈನ್ ಮಿಲನ್ ವಲಯ 8ರ ಕರಾವಳಿ ಸಮಾವೇಶದ ಸಾಂಸ್ಕ್ರತಿಕ ಸ್ಫರ್ಧೆಯಲ್ಲಿ ಬಂಟ್ವಾಳ ಜೈನ್ ಮಿಲನ್ ದ್ವಿತೀಯ ಸ್ಥಾನ ಪಡೆಯಿತು. ಬಹಮಾನ ವಿತರಣೆಯನ್ನು ಯುವಜನ ಕ್ರೀಡಾ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರು ನೀಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀ ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಮಿಲನ್ ಕಾರ್ಯಧ್ಯಕ್ಷರಾದ ಶ್ರೀ ಡಾ| ಯಶೋವರ್ಮ ಅವರು ನೇರವೇರಿಸಿದರು.

ಮಿಲನ್ ಕಾರ್ಯದರ್ಶಿ ಪುಷ್ಪರಾಜ್ ಜೈನ್, ನಿರ್ದೇಶಕರಾದ ಸುದರ್ಶನ್ ಜೈನ್, ಬಂಟ್ವಾಳ ಜೈನ್ ಮಿಲನ್ನ ವೃಷಭರಾಜ್ ಇಂದ್ರ, ಸುಭಾಶಚಂದ್ರ ಜೈನ್, ರಾಜ್ಪ್ರಸಾದ್ ಅರಿಗ, ಅಜಿತ್ ಕುಮಾರ್ ಜೈನ್, ಡಾ| ಸೀಮಾ ಸುದೀಪ್ ಸಿದ್ದಕಟ್ಟೆ, ಹಾಗೂ ತಂಡದವರು ಪ್ರಶಸ್ತಿ ಫಲಕ ಸ್ವೀಕರಿಸಿದರು.