ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಸರ್ಕಾರಿ ಶಾಲೆಯಲ್ಲಿ ಅ. ೧೫ರಂದು ಬೆಳಿಗ್ಗೆ ೯:೩೦ರಿಂದ ಸಂಜೆ ೫ ಗಂಟೆಯವರೆಗೆ “ಆರೋಗ್ಯ ಕರ್ನಾಟಕ” ಅಭಿಯಾನ ನಡೆಯಲಿದೆ.

ಆರೋಗ್ಯ ತಪಾಸಣೆ, ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ) ಕಾರ್ಡ್(ಅಭಾ ಕಾರ್ಡ್) ನೋಂದಣಿ ನಡೆಯಲಿದೆ. ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ, ಒಟಿಪಿಗಾಗಿ ಮೊಬೈಲ್ ತರತಕ್ಕದ್ದು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಒ ಅಬೂಬಕ್ಕರ್ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *