ಹಾಗೂ ಪದಾದಿಕಾರಿಗಳ ಆಯ್ಕೆ
ಕೈಕಂಬ: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಮಳಲಿ-ಮಟ್ಟಿ ಇದರ ಅಧ್ಯಕ್ಷರಾಗಿ ಕೇಶವ ಪೂಜಾರಿ ಮಟ್ಟಿ ಆಯ್ಕೆಯಾಗಿದ್ದಾರೆ.

ದೀಪಕ್ ಕೋಟ್ಯಾನ್ ಹಾಗೂ ಮೋಹನ್ ದಾಸ್ ಅವರ ಉಪಸ್ಥಿತಿಯಲ್ಲಿ ಗೌರವ ಅಧ್ಯಕ್ಷರುಗಳಾಗಿ ವಿಶ್ವನಾಥ್ ಪೂಜಾರಿ ಮಟ್ಟಿ, ಗೋಪಾಲ ಪೂಜಾರಿ ಅರ್ಬಿ, ಯೋಗೀಶ್ ಪೂಜಾರಿ, ರಮೇಶ್ ಪೂಜಾರಿ ಮತ್ತು ಹರಿಶ್ಚಂದ್ರ ಕೊಳಂಬೆ, ಅಧ್ಯಕ್ಷರುಗಳಾಗಿ ಕೇಶವ ಪೂಜಾರಿ ಮಟ್ಟಿ, ಉಪಾಧ್ಯಕ್ಷರಾಗಿ ಸದಾನಂದ ಪೂಜಾರಿ ಮತ್ತು ವಸಂತ ಪೂಜಾರಿ, ಕಾರ್ಯದರ್ಶಿಯಾಗಿ ಸಚಿನ್ ಸಾಲಿಯಾನ್ ಮಟ್ಟಿ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಪೂಜಾರಿ, ಕೋಶಾಧಿಕಾರಿಯಾಗಿ ಮೋಹನದಾಸ್ ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ
ದಯಾನಂದ, ಸಂಘಟನೆ ಕಾರ್ಯದರ್ಶಿಯಾಗಿ ನೀಲಯ್ಯ ಪೂಜಾರಿ, ಅಶೋಕ್ ಮಟ್ಟಿ, ಸೀತಾರಾಮ ಪೂಜಾರಿ ಹಾಗೂ
ಕುಮಾರ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುಮಿತ್ರ, ಉಪಾಧ್ಯಕ್ಷರಾಗಿ ವಿದ್ಯಾ ಮಟ್ಟಿ, ಕಾರ್ಯದರ್ಶಿಯಾಗಿ ವಾಣಿ ಕೈಕಂಬ, ಜೊತೆ ಕಾರ್ಯದರ್ಶಿಯಾಗಿ ಸುಶ್ಮಿತಾ, ಕೋಶಾಧಿಕಾರಿಯಾಗಿ ಗೀತಾ ಆಯ್ಕೆಯಾಗಿದ್ದಾರೆ.