ಕೈಕಂಬ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಮಳಲಿ ವಲಯದ ಉದ್ಘಾಟನೆ ಮತ್ತು ಪದಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ನ.20ರಂದು ಭಾನುವಾರ ಬಿಡುಗಡೆಗೊಳಿಸಿದರು.

ಸಂಘದ ನಿಯೋಜಿತ ಗೌರವಾಧ್ಯಕ್ಷರಾದ ವಿಶ್ವನಾಥ ಪೂಜಾರಿ, ಯೋಗೀಶ್ ಪೂಜಾರಿ, ಹರೀಶ್ಚಂದ್ರ ಬಿರಾವು, ನಿಯೋಜಿತ ಅಧ್ಯಕ್ಷ ಕೇಶವ ಪೂಜಾರಿ ಮಟ್ಟಿ, ನಿಯೋಜಿತ ಉಪಾಧ್ಯಕ್ಷ ಸದಾನಂದ ಪೂಜಾರಿ, ಕಾರ್ಯದರ್ಶಿ ಸಚಿನ್ ಸಾಲ್ಯಾನ್ ಮಟ್ಟಿ, ಕೋಶಾಧಿಕಾರಿ ಮೋಹನದಾಸ್, ಜತೆ ಕೋಶಾಧಿಕಾರಿ ದಯಾನಂದ ಪೂಜಾರಿ ಮಳಲಿ ಸೈಟ್, ಸಂಘಟನಾ ಕಾರ್ಯದರ್ಶಿ ನೀಲಯ್ಯ ಪೂಜಾರಿ, ಮಹಿಳಾ ಘಟಕದ ನಿಯೋಜಿತ ಕಾರ್ಯದರ್ಶಿ ವಾಣಿ ಕೈಕಂಬ, ಪ್ರಮುಖರಾದ ಸದಾಶಿವ ಕರ್ಕೇರ, ಬಿಲ್ಲವ ಬ್ರಿಗೇಡ್ ನ ಪ್ರಜ್ವಲ್ ದಂಡೆಕೇರಿ, ಕೃಷ್ಣ ಶಾಂತಿ, ರೂಪೇಶ್‌ ಶಾಂತಿ, ಚಂದ್ರಹಾಸ ಶಾಂತಿ ಮೊದಲಾವರಿದ್ದರು.

ಡಿ.25ರಂದು ಉದ್ಘಾಟನೆ: ಡಿ.25ರಂದು ಬೆಳಗ್ಗೆ 10.30ಕ್ಕೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸುವರು. ಸಭಾ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಮಠ ಸೋಲೂರು ಮಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಘದ ನಿಯೋಜಿತ ಅಧ್ಯಕ್ಷ ಕೇಶವ ಪೂಜಾರಿ ಅಧ್ಯಕ್ಷತೆ ವಹಿಸುವರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್. ಪದಪ್ರದಾನ ಮಾಡುವರು. ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸಮಿತಿ ಅಧ್ಯಕ್ಷ ಚಿತ್ತರಂಜನ್ ಗರೋಡಿ ನೂತನ ಸಂಘವನ್ನು ಮೊದಲಾದವರು ಪಾಲ್ಗೊಳ್ಳುವರು.

ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನ್ಯಾಕ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖ‌ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಜಯಂತ್ ನಡುಬೈಲು ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *