ಸುದ್ದಿ9 ಬಂಟ್ವಾಳ: ನಿಷ್ಠೆ, ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಿದರೆ ಉದ್ಯಮ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿಯೇ ಯಶಸ್ಸು ಪಡೆಯಲು ಸಾಧ್ಯ ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಕಲ್ಲಡ್ಕ ಬೋಳಂಗಡಿಯ ನರಹರಿ ದೇವಸ್ಥಾನದ ಮುಂಭಾಗದಲ್ಲಿರುವ ನರಹರಿ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಗೊಂಡ ಹರಿಗಣೇಶ್ ಎಂಟರ್ಪ್ರೈಸಸ್ನ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಠಿಣ ಶ್ರಮ ಪಟ್ಟು ಈ ಹಂತಕ್ಕೆ ತಲುಪಿರುವ ಸಂಸ್ಥೆಯ ಮಾಲಕರ ಗುಣಗಾನ ಮಾಡಿದ ಅವರು ಸಂಸ್ಥೆಗೆ ಶುಭಹಾರೈಸಿದರು.
ಸಂಸ್ಥೆಯ ಮಾಲಕ ನಾಗರಾಜ ಪೂಜಾರಿಯವರ ಮಾತಪಿತರಾದ ಚೆನ್ನಪ್ಪ ಪಜಾರಿ ಮತ್ತು ಸುಂದರಿ ದಂಪತಿ ಹರಿಗಣೇಶ್ ಎಂಟರ್ಪ್ರೈಸಸ್ನ್ನು ಉದ್ಘಾಟಿಸಿದರು. ಕಲ್ಲಡ್ಕ ನರಹರಿ ಸಂಕೀರ್ಣದ ಮಾಲಕ ಸಂಜೀವ ಆಳ್ವ, ದ.ಕ.ಜಿಲ್ಲಾ ಮೂತರ್ೆದಾರರ ಸಹಕಾರಿ ಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಶರತ್ ಆಳ್ವ ಕಲ್ಲಡ್ಕ ಉಪಸ್ಥಿತರಿದ್ದರು
