ಸುದ್ದಿ9 ಬಂಟ್ವಾಳ: ತಾಯಿ ಸಂಸ್ಕೃತಿಯ ಕೇಂದ್ರ ಬಿಂದು. ತಾಯಿಯ ಮಡಿಲಿಗಿಂತ ದೊಡ್ಡದಾದ ಮಠ ಮಂದಿರ ಮತ್ತೊಂದಿಲ್ಲ. ತಾಯಿಯೇ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಮಾಡಬೇಕು, ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮದ ವಿದ್ಯೆಯನ್ನು ನೀಡಬೇಕು ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಪುದು ಗ್ರಾಮದ ಸುಜೀರುವಿನ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ನಡೆಯುವ ನೇಮೋತ್ಸವ ಮತ್ತು ಸಾರ್ವಜನಿಕ ಶನಿಪೂಜೆಯ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮುಗ್ದತೆ ಇದ್ದಾಗ ದೈವತ್ವ ಒಲಿಯುತ್ತದೆ, ಇಂತಹ ಮುಗ್ದೆತಯನ್ನು ಗ್ರಾಮೀಣ ಭಾಗದ ಜನರಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಫರಂಗಿಪೇಟೆ ವ್ಯ. ಸೇ.ಸ.ಬ್ಯಾಂಕಿನ ಅಧ್ಯಕ್ಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ ಮುಂದಿನ ಸಮಾಜವನ್ನು ರೂಪಿಸುವ ಜವಬ್ದಾರಿ ಹೊತ್ತಿರುವ ಯುವ ಜನಾಂಗ ಧಾಮರ್ಿಕ ಕೇಂದ್ರಗಳತ್ತವೂ ಆಸಕ್ತಿ ಬೆಳೆಸಿದಾಗ ಮಾತ್ರ ಅದು ಉಳಿಯಲು ಸಾಧ್ಯ ಎಂದರು.
ಈ ಸಂದರ್ಭ ಜಿ.ಪಂ.ಸದಸ್ಯೆ ಜಯಶ್ರೀ ಕೆ.ಎ., ಹಾಗೂ ಸ್ಥಳೀಯ ಪ್ರತಿಭೆ ರಮ್ಯಾ ಅವರನ್ನು ಸನ್ಮಾನಿಸಲಾಯಿತು. ಪುದು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುದು ಗ್ರಾ.ಪಂ.ಸದಸ್ಯರಾದ ಮಾಲತಿ ಶೆಟ್ಟಿ ಹೊಸಮನೆ, ಗಣೇಶ್ ಎಸ್.ದತ್ತ ನಗರ, ಜಾನಕೀ ಸುಜೀರ್ ಹಾಜರಿದ್ದರು. ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಅಮರ್ ಆಳ್ವ ಸುಜೀರು ಗುತ್ತು, ಗುರಿಕಾರರಾದ ಮುದರ ಹಾಗೂ ಸುಂದರ ದೈಯಡ್ಕ ವೇದಿಕೆಯಲ್ಲಿದ್ದರು.
ಗೌರವಾದ್ಯಕ್ಷ ಅರುಣ್ಕುಮಾರ್ ಶೆಟ್ಟಿ ನುಳಿಯಾಲ್ಗುತ್ತು ಸ್ವಾಗತಿಸಿದರು, ನಾಗೇಶ್ ಅಮೀನ್ ದತ್ತ ನಗರ ವಂದಿಸಿದರು. ಸುನೀಲ್ ಬಿ.ಸಿ.ರೋಡು ನಿರೂಪಿಸಿದರು.
