ಭಜನೆಯಿಂದ ನೆಮ್ಮದಿ ಸಿಗುತ್ತದೆ: ಕಾಂತಪ್ಪ ಶೆಟ್ಟಿ
ಸುದ್ದಿ9 ಕೈಕಂಬ: ಭಜನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಭಜನೆ ನಡೆಯುವುದರಿಂದ ದುಷ್ಟ ಶಕ್ತಿಗಳು ನಾಶವಾಗಿ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಹೇಳಿದರು.
ಅವರು ಜ.3ರ ಸಂಜೆ ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಶ್ರೀ ಮಣಿಕಂಠಸೇವಾ ಸಮಿತಿ ವತಿಯಿಂದ ಅಯ್ಯಪ್ಪ ವೃತಧಾರಿಗಳ ಪರವಾಗಿ ನಡೆದ 9ನೇ ವರ್ಷದ ಭಜನಾ ಸಂಕೀರ್ತನೆಗೆ ಚಾಲನೆ ನೀಡಿ ಮತಾಡುತ್ತಿದ್ದರು.
ನಂತರ ಮಾತಾಡಿದ ಅವರು ಹಳ್ಳಿಗಳಲ್ಲಿ ಹೆಚ್ಚು ಹೆಚ್ಚು ಭಜನಾ ಕಮ್ಮಟಗಳನ್ನು ಆಯೋಜಿಸಬೇಕು. ಮನೆಮನೆಯಲ್ಲಿ ಭಜನೆ ಹೇಳುವುದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕøತಿ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

 

13

1

2

3

4

5

6

7

9

11

 

14

15
ಮಣಿಕಂಠಪುರದಲ್ಲಿ ಸೂರ್ಯಹಸ್ತಂದ ಪ್ರಾರಂಭಗೊಂಡು ಮರುದಿನ ಜ.4ರಂದು ಭಾನುವಾರ ಸೂರ್ಯೋದಯುದವರೆಗೆ ವಿವಿಧ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ವೆಂಕಟೇಶ್ ನಾವಡ ಪೊಳಲಿ, ಯಶೋಧರ ಕಲ್ಕುಟ, ಶಶಿ ಮಹಾರಾಜ್, ರಾಘು ಗುರುಪುರ, ಅಣ್ಣಿಪೂಜಾರಿ, ಬಾಬುರಾವ್, ರಾಜು ಪೊಳಲಿ, ಮತ್ತಿತರು ಉಪಸ್ಥಿತರಿದ್ದರು.
ಭಾನುವಾರ ಬೆಳಗ್ಗೆ 9 ಗಂಟೆಯಿಂದ ಅಯ್ಯಪ್ಪವೃತಧಾರಿಗಳಿಗೆ ಬಾಬು ಗುರುಸ್ವಾಮಿ ಮಣಿಕಂಠಪುರ ಇವರು ಇರುಮುಡಿ ಕಟ್ಟು ಕಟ್ಟಲಿದ್ದಾರೆ. 12.30 ಕ್ಕೆ ಅಯ್ಯಪ್ಪ ಸ್ವಾಮಿಯ ಮಹಾ ಪೂಜೆ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪನೆ ಜರಗಲಿದ್ದು. ಸಾಯಂಕಲ 4 ಗಂಟೆಗೆ ಸ್ವಾಮಿಗಳ ಯಾತ್ರೆ ನಡೆಯಲಿದೆ.

By suddi9

Leave a Reply

Your email address will not be published. Required fields are marked *