ಸುದ್ದಿ9 ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಪಾಲೆದಮರ ಎಂಬಲ್ಲಿ ಸ್ಥಳೀಯ ಪಿಲಿಮೊಗರು ನಿವಾಸಿ ಸಂಜೀವ ನಾಯ್ಕ್ ಎಂಬವರಿಗೆ ಜಾತಿ ಬಗ್ಗೆ ನಿಂದಿಸಿ ಬಳಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ನಿಶಾಂತ್(23), ರೂಪೇಶ್(22), ಚೇತನ್(23), ದೇವಿ ಪ್ರಸಾದ್(22) ಎಂದು ಗುರುತಿಸಲಾಗಿದ್ದು, ಇವರನ್ನು ಬಂಧಿಸಲಾಗಿದೆ ಎಂದು ಪುಂಜಾಲಕಟ್ಟೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *