ಸುದ್ದಿ9 ಬಂಟ್ವಾಳ: ಕಳೆದ ಇಪ್ಪತ್ತು ವರ್ಷಗಳ ಬೇಡಿಕೆಯಾದ ಶಂಭೂರಿನಿಂದ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕಕ್ಕೆ ಸಂಪರ್ಕಿಸುವ ರಸ್ತೆಗೆ ಗುದ್ದಲಿ ಪೂಜೆಯನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಧಕ್ಷಿಣ ಮದ್ಯ ಕ್ಷೇತ್ರೀಯ ಸಂಪರ್ಕ ಪ್ರಮುಕ್ ಡಾ.ಪ್ರಭಾಕರ ಭಟ್ ನೆರವೇರಿಸಿದರು.
ಈ ಭಾಗದ ಜನರ ಬೇಡಿಕೆಗೆ ಈ ರಸ್ತೆಯು ಮೂಲ ಸೌಕರ್ಯದಲ್ಲಿ ಒಂದಾಗಿದ್ದು ಜನರು ಒಬ್ಬರನ್ನೊಬ್ಬರು ಅರ್ಥೈಸಿ ಈ ರಸ್ತೆಗೆ ಸ್ಥಳದಾನ ಮಾಡಿದವರನ್ನು ಅಭಿನಂದಿಸಿ ಶೀಘ್ರದಲ್ಲಿ ಈ ರಸ್ತೆಯ ಪ್ರಯೋಜನ ಸಿಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೇಶವು ಅಭಿವೃದ್ಧಿ ಹೊಂದುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಮನೆ ಬಾಗಿಲಿಗೆ ಆದಾಗ ಅವರ ಬಾವನೆಗೆ ಪೂರಕ ಆಗುತ್ತದೆ ಎಂದ ಅವರು ಈ ರಸ್ತೆಯ ಅಭಿವೃದ್ದಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾೈಕ್‍ರವರು ಮಾತನಾಡಿ ಈ ರಸ್ತೆಯ ಪ್ರಯೋಜನ ಗ್ರಾಮೀಣ ಪ್ರದೇಶವಾದ ಈ ಬಾಗದ ಜನರಿಗೆ ಪ್ರಯೋಜನ ಸಿಗುವಂತಾಗಲಿ ಎಂದರು. ಧಾನಿಗಳ ಸಹಾಯದಿಂದ ನಿರ್ಮಾಣವಾಗುವ ಶಂಭೂರು ವ್ಯಾಯಾಮ ಶಾಲೆಯಿಂದ ಪ್ರಾರಂಭಗೊಂಡು ಬರ್ಕೆ, ಕಕ್ಕೆಮಜಲು ಮೂಲಕ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಈ ರಸ್ತೆಗೆ ಸಹಕರಿಸುವುದಾಗಿ ಮುಖ್ಯ ಅತಿಥಿಯಾಗಿ ಹೇಳಿದರು.ಈ ಸಂದರ್ಭದಲ್ಲಿ ಉದ್ಯಮಿ ರಘು ಸಪಲ್ಯ ಪಾಣೆಮಂಗಳೂರು,ಬಂಟ್ವಾಳ ಬಿಜೆಪಿ ಪ್ರದಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಉದ್ಯಮಿ ಬಿ,ನಾರಾಯಣ ಸೋಮಯಾಜಿ, ಸ್ಥಳೀಯರಾದ ಶ್ರೀಧರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳದಾನ ಮಾಡಿದವರನ್ನು ಗುರುತಿಸಲಾಯಿತು. ತಾ.ಪಂ ನಿಕಟ ಪೂರ್ವ ಉಪಾಧ್ಯಕ್ಷ ಆನಂದ ಎ ಶಂಭೂರು ಸ್ವಾಗತಿಸಿ, ಕೇಶವ ಬರ್ಕೆ ವಂದಿಸಿದರು.ಕಮಲಾಕ್ಷ ಶಾಂತಿಲ ಹಾಗೂ ಭೋಜರಾಜ ಶಂಭೂರು ಕಾರ್ಯಕ್ರಮ ನಿರ್ವಹಿಸಿದರು
_DSC0099

_DSC0016

_DSC0036

By suddi9

Leave a Reply

Your email address will not be published. Required fields are marked *