ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರು ನಕಲಿ ಮತದಾನದ ಗುರುತಿನ ಚೀಟಿ ಹೊಂದಿದ್ದಾರೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. ಈ ಸಂಶಯ ಮೂಡಲು ಕಾರಣವಾಗಲು ಕಾರಣವಾದ ಅಂಶವೇನೆಂದರೆ ಸರಕಾರೇತರ ಸಂಸ್ಥೆಯೊಂದು ಅರವಿಂದ ಕೇಜ್ರಿವಾಲ್ ಗುರುತಿನ ಚೀಟಿಯ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

kejrival3
ಅರವಿಂದ್ ಕೇಜ್ರಿವಾಲ್ ದೆಹಲಿಯ ನಿವಾಸಿಯೇ ಅಲ್ಲ. ಅವರು ಸುಳ್ಳು ಮಾಹಿತಿ ನೀಡಿ ಮತದಾನದ ಗುರುತಿನ ಚೀಟಿ ಪಡೆದಿದ್ದಾರೆ ಎಂದು ಆರೋಪಿಸಿರುವ ಸರ್ಕಾರೇತರ ಸಂಸ್ಥೆಯು ತಕ್ಷಣವೇ ಅವರ ಗುರುತಿನ ಚೀಟಿಯನ್ನು ರದ್ದು ಪಡಿಸಬೇಕೆಂದು ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.
ಆಮ್ ಆದ್ಮಿ ಮುಖಂಡ ಅರವಿಂದ್ ಕೇಜ್ರಿವಾಲ್ ತಿಲಕ್‍ಮಾರ್ಗ್‍ನಿಂದ ಬಿ.ಕೆ.ದತ್ತ್ ಕಾಲೋನಿಗೆ ವರ್ಗಾಯಿಸಿ ಗುರುತಿನ ಚೀಟಿ ಪಡೆದಿದ್ದು ರಫಿಮಾರ್ಗ್‍ನಲ್ಲಿರುವ ವಿಠ್ಠಲಭಾಯಿ ಪಟೇಲ್ ನಿವಾಸದ ವಿಳಾಸ ನೀಡಿರುವುದು ತಪ್ಪುಮಾಹಿತಿಯಿಂದ ಕೂಡಿದೆ ಎಂದು ಸಂಸ್ಥೆ ಅರೋಪಿಸಿದ್ದು ಇವರು ಚುನಾವಣೆಗೆ ಸ್ಪರ್ಧಿಸುವುದಿರಲಿ, ಮತದಾನ ಮಾಡಲೂ ಅನರ್ಹರು ಎಂಬ ವಾದವನ್ನು ಆಯೋಗಕ್ಕೆ ತಮ್ಮ ಪತ್ರದಲ್ಲಿ ಮಂಡಿಸಿದೆ.

By suddi9

Leave a Reply

Your email address will not be published. Required fields are marked *