ಶ್ರೀನಿತ್ ದಾಖಲೆಯ ಹೈಜಂಪ್ : ಮೂರು ಹೊಸ ಕೂಟ ದಾಖಲೆ
ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದ ನೂತನ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯುತ್ತಿರುವ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್ನ ಎರಡನೇ ದಿನವಾದ ಶನಿವಾರ ಪದಕಪಟ್ಟಿಯಲ್ಲಿ 42 ಅಂಗಕಗಳೊಂದಿಗೆ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದೆ.
ಕೂಟದಲ್ಲಿ ಮೂರು ಹೊಸ ದಾಖಲೆಗಳಾಗಿವೆ. ಹೈಜಂಪ್ನಲ್ಲಿ ಮಂಗಳೂರು ವಿವಿಯ ಅತಿಥೇಯ ಆಳ್ವಾಸ್ನ ಕ್ರೀಡಾ ಪಟು ಶ್ರೀನಿತ್ ಮೋಹನ್ ದಾಖಲೆಯ ಜಿಗಿತದೊಂದಿಗೆ ಚಿನ್ನಗೆಲ್ಲುವ ಮೂಲಕ ಗಮನಾರ್ಹ ದಾಖಲೆ ಮಾಡಿದ್ದಾರೆ.
ಪದಕ ಪಟ್ಟಿಯಲ್ಲಿ 36ಅಂಕಗಳನ್ನು ಪಡೆದ ಪಂಜಾಬ್ ವಿವಿ ಪಟಿಯಾಲಾ, ದ್ವಿತೀಯ ಸ್ಥಾನ ಹಾಗೂ 31 ಅಂಕಗಳನ್ನು ಪಡೆದ ಕ್ಯಾಲಿಕಟ್ ವಿವಿ ತೃತೀಯ ಸ್ಥಾನದಲ್ಲಿದೆ.
Srinith Mohan

manasa (20)

manasa (37)

Srinith Mohan (1)

SRINITH MOHAN (right),Chetan B (left), Mangaluru University
3 ಕೂಟ ದಾಖಲೆಗಳು: ಹೈಜಂಪ್ನಲ್ಲಿ ಮಂಗಳೂರು ವಿ.ವಿ.ಯ ಶ್ರೀನಿತ್ ಮೋಹನ್ 2.20 ಮೀ ಜಿಗಿತದ ಮೂಲಕ ಅಮೃತಸರದ ಗುರುನಾನಕ್ ದೇವ್ ವಿವಿಯ ಜಗದೀಪ್ ಸಿಂಗ್ 2011ರಲ್ಲಿ ಹೆಸರಲ್ಲಿದ್ದ ದಾಖಲೆ(2.15 ಮೀ)ಯನ್ನು ಅಳಿಸಿದ್ದಾರೆ. ಮಹಿಳೆಯರ 5000 ಮೀ ಓಟದಲ್ಲಿ ಪುಣೆಯ ಎಸ್.ಪಿ.ಪಿ. ವಿವಿಯ ಜಾಧವ್ ಸಂಜೀವಿನಿ 16.36.45 ಸೆ. ಅವಧಿಯಲ್ಲಿ ಗುರಿ ತಲುಪಿ ಪಟಿಯಾಲಾ ವಿವಿಯ ನವಜೋಬನ್ ಕೌರ್ ಹೆಸರಲ್ಲಿದ್ದ ದಾಖಲೆ ( 17:00:74) ಯನ್ನು ಅಳಿಸಿದ್ದಾರೆ. ಪುರುಷರ 400ಮೀ ಹರ್ಡಲ್ಸ್ನಲ್ಲಿ ಪಟಿಯಾಲಾ ವಿವಿ ಪಂಜಾಬ್ನ ವಿಜಯ್ ಸಿಂಗ್ ಮಲಿಕ್ (51.51 ) ಕಲ್ಲಿಕೋಟೆ ವಿವಿಯ ಶೆಲಿಜೆ ವಗರ್ೀಸ್ ಹೆಸರಲ್ಲಿದ್ದ ದಾಖಲೆ( 52.12)ಯನ್ನು ಅಳಿಸಿದ್ದಾರೆ.

ಶ್ರೀನಿತ್ ಮೋಹನ್ ಇವರು ಮೂಲತ: ಕೇರಳದವರಾಗಿದ್ದು ವಿದ್ಯಾಭ್ಯಾಸವನ್ನು ಆಳ್ವಾಸ್ ಕಾಲೇಜಿನಲ್ಲಿ ಪಿ.ಪಿ.ಎಸ್ ವಿಭಾಗದಲ್ಲಿ ಪ್ರಥಮ ಪದವಿ ವಿಧ್ಯಾಭ್ಯಾಸವನ್ನು ಪಡೆಯುತಿದ್ದಾರೆ. ಅಂತರ್ ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾ ಕೂಟದ ಎತ್ತರ ಜಿಗಿತದಲ್ಲಿ ತನ್ನದೆ ಹಳೆಯ ದಾಖಲೆಯನ್ನೂ ಮುರಿದ ಸಂತೋಷದ್ದಾರೆ. ತನ್ನ ಗೆಲುವಿಗೆ ಆಳ್ವಾಸ್ ಸಂಸ್ಥೆ ಮತ್ತು ನನ್ನ ಪೋಷಕರು ಹಾಗೆಯೇ ನನ್ನ ಸಲಹೆಗಾರರದ ಇವರುಗಳ ಪಾತ್ರ ಮುಖ್ಯ ವಹಿಸುತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

By suddi9

Leave a Reply

Your email address will not be published. Required fields are marked *