ಮೂಡದಿದ್ರೆಯ ಸ್ವರಾಜ್ ಮೈದಾನ ಅಕ್ಷರಶಃ ಈಗ ಅತ್ಲೆಟಿಕ್ ಘಟಾನುಘಟಿಗಳಿಗೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ನಡೆಯುತ್ತಿರುವ 75ನೇ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಅತ್ಲೆಟಿಕ್ ಚಾಂಪಿಯನ್ ಶಿಪ್ 2ನೇ ದಿನಕ್ಕೆ ಕಾಲಿಟ್ಟಿದ್ದು ರಾಜ್ಯದ, ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಅತ್ಲೇಟಿಗಳ ಸಮಾಗಮಕ್ಕೆ ವೇದಿಕೆಯಾಗಿದೆ. ಕ್ರೀಡಾಪಟುಗಳು ದಾಖಲೆಯ ಪುಟಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದರಲ್ಲಿ ಕಾತರರಾಗಿದ್ದಾರೆ. ಅವರುಗಳಲ್ಲಿ ಒಬ್ಬರು ಜಾಧವ್ ಸಂಜೀವಿನಿ.ಜಾಧವ್ ಸಂಜೀವಿನಿ ನಾಸಿಕ್ನ ವಡೋಲಿಬಾಯ್ನವರು. 19 ವರ್ಷದ ಈ ಪೋರಿ ತನ್ನ ಮೊದಲನೆಯ ಅಂತರ ವಿಶ್ವವಿದ್ಯಾಲಯ ಮಟ್ಟದ ಚಾಂಪಿಯನ್ಶಿಪ್ನಲ್ಲಿ ದಾಖಲೆಯನ್ನು ಮಾಡಿ ಸಾಧನೆಯನ್ನು ಮೆರೆದಿದ್ದಾಳೆ. ಮಹಿಳೆಯರ 5000 ಮೀ. ಓಟವನ್ನು 16.36 ಸೆಂಕೆಂಡ್ನಲ್ಲಿ ಕ್ರಮಿಸಿ ಹಿಂದೆ ನೌಜೋಬನ್ ಕೌರ್(17.00 ಸೆಕೆಂಡ್) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ತನ್ನ ಮಡಿಲಿಗೆ ಹಾಕಿಕೊಂಡಿದ್ದಾಳೆ. `ಇದರಲ್ಲಿ ನನ್ನ ಜೊತೆಗೆ ನನ್ನ ಕೋಚ್ ವಿಜೇಂದ್ರ ಸಿಂಗ್ರವರ ಪಾಲು ಕೂಡ ದೊಡ್ಡದು’ ಎಂಬುದು ಸಂಜೀವಿನಿಯ ಮಾತು.

ಜಾಧವ್ ಸಂಜೀವಿನಿಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಅಪಾರ ಆಸಕ್ತಿ. ಅದಕ್ಕೆ ನೀರೆರೆದು ಪೋಷಿಸಿದವರು ಆಕೆಯ ಪೋಷಕರು. ಕ್ರೀಡಾ ಹಿನ್ನೆಲೆಯಿಂದಲೇ ಬಂದಿರುವ ಈಕೆಯ ತಂದೆ ಬಾಬುರಾವ್ ಸದಾಶಿವ ಜಾದರ್ ರಾಷ್ಟ್ರ ಮಟ್ಟದ ರಸ್ಲಿಂಗ್ ಪಟು. ಈಕೆಯ ತಾತನು ರಸ್ಲಿಂಗ್ ಕ್ರೀಡಾ ಪಟು. ಹಾಗಾಗಿ ಕ್ರೀಡಾ ವಾತವರಣದಲ್ಲೇ ಬೆಳೆದ ಈಕೆಗೆ ರಸ್ಲಿಂಗ್ನಲ್ಲೂ ಆಸಕ್ತಿ ಇತ್ತು. ಆದರೆ ಕೈ ಬೀಸಿ ಕರೆದದ್ದು ಮಾತ್ರ ರನ್ನಿಂಗ್ ರೇಸ್. ಸದ್ಯ ಬೋಸ್ಲ ಮಿಲಿಟರಿ ಸ್ಕೂಲ್ ನಾಸಿಕ್ನಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ಈಕೆ ಶೈಕ್ಷಣಿಕವಾಗಿಯೂ ಓದುವುದರಲ್ಲಿ ಮುಂದು.
ದಿನದಲ್ಲಿ ಸುಮಾರು 5 ಗಂಟೆಯನ್ನು ವಕರ್್ಔಟ್ಗೆಂದೇ ಮೀಸಲಾಗಿಟ್ಟಿರುವ ಸಂಜೀವಿನಿ ` 5 ಸಾವಿರ ಮೀಟರ್ ನಲ್ಲಿ ದಾಖಲೆಯನ್ನು ಮೊದಲು ನಿರೀಕ್ಷಿಸಿದ್ದೆ, ಅದೇ ನನ್ನ ಕನಸು’ ಎಂದು ಖುಷಿಯಲ್ಲಿ ಹೇಳುತ್ತಾರೆ. ಇನ್ನು 10 ಕಿಲೋ ಮೀಟರ್ರನ್ನು ನಿಮಿಷಗಳಲ್ಲಿ ಕ್ರಮಿಸಿ ನೂತನ ದಾಖಲೆ ಮಾಡಬೇಕೆಂಬುದು ಆಕೆಯ ಮುಂದಿನ ಕನಸು.
ಬ್ರೆಝಿಲ್ನಲ್ಲಿ ನಡೆದ ವರ್ಲ್ಡ್ ಸ್ಕೂಲ್ ಒಲಂಪಿಯಾಡ್, ಏಶಿಯನ್ ಸ್ಕೂಲ್ನಲ್ಲಿ ನಡೆದ 1500, 3000 ಮೀಟರ್ನಲ್ಲಿ ಬೆಳ್ಳಿ ಪದಕ, 4*400 ರಲೇಯಲ್ಲಿ ಚಿನ್ನ, ಚೀನಾದಲ್ಲಿ ನಡೆದ ಜೂನಿಯರ್ ಏಶಿಯನ್ ಚಾಂಪಿಯನ್ ಶಿಪ್ನಲ್ಲಿ ಕಂಚಿನ ಪದಕ ಹೀಗೆ ಸಾಕಷ್ಟು ಪದಕಗಳನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾಳೆ. ಮುಂದೆ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿ ದಾಖಲೆಗಳನ್ನು ಮುರಿದು ದೇಶಕ್ಕೆ ಕೀತರ್ಿ ತರಬೇಕು ಎಂಬ ಇಚ್ಛೆಯಲ್ಲಿ ಇರುವ ಸಂಜೀವಿನಿಗೆ ಆಕೆಯ ಹುಮ್ಮಸ್ಸು, ಕನಸುಗಳೇ ಭವಿಷ್ಯವನ್ನು ನೀಡುತ್ತದೆ.
`ಇದು ನನ್ನ ಮೊದಲನೆಯ ಅಂತರ ವಿಶ್ವವಿದ್ಯಾಲಯ ಮಟ್ಟದ ಅತ್ಲೇಟಿಕ್ ಆಗಿದ್ದು ಇದರಲ್ಲಿ ದಾಖಲೆ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಹಾಗೂ ತುಂಬಾ ಹೆಮ್ಮೆ ಎನಿಸುತ್ತಿದೆ. ಇದರಲ್ಲಿ ನನ್ನಷ್ಟೇ ನನಗೆ ಕೋಚ್ ಆಗಿರುವ ವಿಜೇಂದ್ರ ಸಿಂಗ್ರವರ ಸಹಕಾರವೂ ಇದೆ. ನಿಜಕ್ಕೂ ನಾನು ಖುಷಿಯಾಗಿದ್ದೇನೆ.’-ಜಾಧವ್ ಸಂಜೀವಿನಿ
-ರಕ್ಷಿತಾ ಕುಮಾರಿ ಟಿ.ಡಿ
ಆಳ್ವಾಸ್ ಕಾಲೇಜು,ಮೂಡಬಿದ್ರೆ