ಸುದ್ದಿ9 ಮೂಡುಬಿದಿರೆ:ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ಭಾನುವಾರ ಮುಕ್ತಾಯಗೊಂಡ 13ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕ್ರತ ದೇವೇಂದ್ರ ಕೋಟ್ಯಾನ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ರಾಜೀವ ಶೆಟ್ಟಿ ಎಡ್ತೂರು ಅವರನ್ನು ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಂಬಳ ಸಮಿತಿ ಅಧ್ಯಕ್ಷ ಕೆ. ಅಭಯಚಂದ್ರ , ಚಿತ್ರ ನಟ ಸುಮಂತ್, ಡಾ.ಎಂ. ಮೋಹನ ಆಳ್ವ, ಕಂಬಳ ಸಮಿತಿಯ ಭಾಸ್ಕರ ಎಸ್. ಕೋಟ್ಯಾನ್, ಸುರೇಶ್ ಪ್ರಭು, ರತ್ನಾಕರ ಸಿ. ಮೊೈಲಿ , ವಿಲ್ಫ್ರೆಡ್ ಮೆಂಡೋನ್ಸ , ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಸುರೇಶ್ ಕೆ.ಪೂಜಾರಿ , ನಮಿರಾಜ್ ಬನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಒಟ್ಟು 162 ಜತೆ ಕೋಣಗಳು ಭಾಗವಹಿಸಿದ್ದವು. ವಿಜೇತ ಕೋಣಗಳ ಪರವಾಗಿ ಅದರ ಮಾಲೀಕರಿಗೆ ಭಾನುವಾರ ಬೆಳಿಗ್ಗೆ ಬಹುಮಾನ ವಿತರಿಸಲಾಯಿತು.
ಫಲಿತಾಂಶದ ವಿವರ:
ಕನೆ ಹಲಗೆ ( 03 ಜತೆ)
ವಾಮಂಜೂರು ತಿರುವೈಲು ಗುತ್ತು ಅಭಯ್ ನವೀನ್ ಆಳ್ವ – ಪ್ರಥಮ (ಕೋಣ ಓಡಿಸಿದವರು ಮಂದಾರ್ತಿ ಶೀರೂರು ನಾರಾಯಣ ನಾಯ್ಕ)
ಬಾರ್ಕೂರು ಶಾಂತಾರಾಮ ಶೆಟ್ಟಿ – ದ್ವಿತೀಯ (ಕೋಣ ಓಡಿಸಿದವರು ಮಂದಾರ್ತಿ ಶೀರೂರು ಗೋಪಾಲ ನಾಯ್ಕ)
ಹಗ್ಗ ಕಿರಿಯ(19 ಜತೆ)
ನಂದಳಿಕೆ ಶ್ರೀಕಾಂತ್ ಭಟ್ ಎ. – ಪ್ರಥಮ (ಕೋಣ ಓಡಿಸಿದವರು ನಕ್ರೆ ಜಯಕರ ಮಡಿವಾಳ)
ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್-ಎದ್ವಿತೀಯ(ಕೋಣ ಓಡಿಸಿದವರು ಕೊಳಕೆ ಇರ್ವತ್ತೂರು ಅನಂದ)
ಹಗ್ಗ ಹಿರಿಯ: (26 ಜತೆ)
ರಾರಿ ಶೀಲತ ಸಾಯಿ ಎಸ್ಟೇಟ್ ರಾಜೇಶ್ ಶೆಟ್ಟಿ.ಎ -ಪ್ರಥಮ(ಕೋಣ ಓಡಿಸಿದವರು ಉಜಿರೆ ಇಜ್ಜಾವು ದೇರಣ್ಣ ನಾಯ್ಕ್),
ಕೌಡೂರುಬೀಡು ತುಷಾರ್ ಮಾರಪ್ಪ ಭಂಡಾರಿ?ದ್ವಿತೀಯ -ಕೋಣ ಓಡಿಸಿದವರು ಬಂಗಾಡಿ ಜಮಾಲುದ್ದೀನ್)
ಅಡ್ಡ ಹಲಗೆ-(08 ಜತೆ)
ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು-ಪ್ರಥಮ(ಕೋಣ ಓಡಿಸಿದವರು ಪಣಪೀಲು ರಾಜವರ್ಮ ಮುದ್ಯ),
ನಲ್ಲೂರು ಪೆರಿಬೆಟ್ಟು ಸಂಜೀವ ಮಡಿವಾಳ-ದ್ವಿತೀಯ(ಕೋಣ ಓಡಿಸಿದವರು ಸಾವ್ಯ ಗಂಗಯ್ಯ ಪೂಜಾರಿ)
ನೇಗಿಲು ಹಿರಿಯ-(22 ಜತೆ)
ಬೋಳದ ಗುತ್ತು ಸತೀಶ ಶೆಟ್ಟಿ-ಪ್ರಥಮ(ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಎಂ.ಸುಕೇಶ ಶೆಟ್ಟಿ)
ಮುಲ್ಕಿ ಪಯ್ಯೊಟ್ಟು ಸಾಲ್ಯಾನ್-ದ್ವಿತೀಯ(ಕೋಣ ಓಡಿಸಿದವರು ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)
ನೇಗಿಲು ಕಿರಿಯ:(84 ಜತೆ)
ಎಲ್ಲೂರು ಭಂಡಾರ ಮನೆ ಹರೀಶ ಶೆಟ್ಟಿ – ಪ್ರಥಮ(ಕೋಣ ಓಡಿಸಿದವರು ಉಜಿರೆ ಇಜ್ಜಾವು ದೇರಣ್ಣ ಶೆಟ್ಟಿ)
ಬೋಳದ ಗುತ್ತು ಸತೀಶ್ ಶೆಟ್ಟಿ- ದ್ವಿತೀಯ(ಕೋಣ ಓಡಿಸಿದವರು ಮರೋಡಿ ಶ್ರೀಧರ್)

.



