ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟದ ಮೂರನೇ ದಿನ ಮೂರು ಹೊಸ ಕೂಟದಾಖಲೆಗಳಾಗಿವೆ. ಕ್ರೀಡಾಕೂಟದಲ್ಲಿ ಕೂಟದಾಖಲೆಗಳು ಆರಕ್ಕೆ ಏರಿದೆ.
ಕ್ರೀಡಾಕೂಟದ 2ನೇದಿನ 5000 ಮೀ.ನಲ್ಲಿ ಹೊಸ ದಾಖಲೆ ಮಾಡಿದ್ದ, ಪುಣೆ ಸಾವಿತ್ರಿಬಾಯಿ ಪೌಲೆ ವಿ.ವಿಯ ಜಾದವ್ ಸಂಜೀವಿನಿ ಭಾನುವಾರ ಮತ್ತೊಂದು ದಾಖಲೆ ಮಾಡಿದ್ದಾರೆ. ಭಾನುವಾರ ನಡೆದ 10 ಸಾವಿರ ಕಿ.ಮೀ.ಅನ್ನು 34.58.27 ಸೆಕೆಂಡ್ಸ್‍ಗಳಲ್ಲಿ ಕ್ರಮಿಸಿ,2013ರ ವರೇದೆ ಪೂಜಾ ಅವರ 36.04.34 ನಿಮಿಷ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸಂಜೀವಿನಿ ಭಾಗವಹಿಸಿದ ಎರಡೂ ವಿಭಾಗದಲ್ಲಿ ದಾಖಲೆ ಮಾಡಿರುವುದು ವಿಶೇಷತೆ. ರಾಷ್ಟ್ರಮಟ್ಟದಲ್ಲಿ ಕುಸ್ತಿಪಟುವಾಗಿಯೂ ಕಾಣಿಸಿಕೊಂಡಿರುವ ಈಕೆ, ಒಲಿಂಪಿಕ್ಸ್‍ನಲ್ಲಿ ಸಾಧನೆ ಮಾಡುವ ಕನಸನ್ನು ಹೊಂದಿದ್ದಾರೆ.
ಪುರುಷರ 400ಮೀ ಓಟವನ್ನು 47.01 ಸೆಕೆಂಡ್ಸ್‍ಗಳಲ್ಲಿ ಕ್ರಮಿಸಿದ ದೆಹಲಿ ವಿ.ವಿಯ ಲಿಲಿತ್ ಮಥೂರ್, 2006ರಲ್ಲಿ ಆಚಾರ್ಯ ನಾಗರ್ಜುನ ವಿ.ವಿ.ಯ ಡಿ.ರೆಡ್ಡಿ ಅವರ 47.10 ಸೆಕೆಂಡ್ಸ್ ದಾಖಲೆಯನ್ನು ಅಳಿಸಿದ್ದಾರೆ. ಮಹಿಳೆಯರ 400ಮೀ ಓಟದಲ್ಲೂ ದಾಖಲೆಯಾಗಿದ್ದು, ಕೊಟ್ಟಾಯಂ ಎಂ.ಜಿ.ವಿ.ವಿಯ ಅನಿಲ್ಡಾ ಥೋಮಸ್ 400ಮೀ. ಅನ್ನು 52.99 ಸೆಕೆಂಡ್ಸ್‍ನಲ್ಲಿ ಕ್ರಮಿಸಿ, ಕ್ಯಾಲಿಕಟ್ ವಿ.ವಿಯ ಟಿಂಟು ಲುಕಾ 2009ರಲ್ಲಿ ಮಾಡಿದ 53.26 ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಮಂಗಳೂರು ವಿ.ವಿ.ಮುನ್ನಡೆ

mbd_jan18_8(lalith) (1)

mbd_jan18_8(Anilda Thomas) (2)

mbd_jan18_8(Anilda Thomas) (1)

mbd_jan18_8 (Snajiveeni Jadav)

mbd_jan18_8(lalith1)
ಕ್ರೀಡಾಕೂಟದ 3ನೇ ದಿನವು ಮಂಗಳೂರು ವಿ.ವಿ.53 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. 51 ಅಂಕಗಳೊಂದಿಗೆ ಪಟಿಯಾಲ ಪಂಜಾಬಿ ವಿ.ವಿ ದ್ವಿತೀಯ ಹಾಗೂ 44 ಅಂಕಗಳೊಂದಿಗೆ ಕೊಟ್ಟಾಯಂ ಎಂ.ಜಿ. ವಿ.ವಿ ತೃತೀಯ ಸ್ಥಾನದಲ್ಲಿದೆ.

3ನೇ ದಿನದ ಫಲಿತಾಂಶ:
ಮಹಿಳಾ ವಿಭಾಗ
10,000 ಮೀ- ಜಾದವ್ ಸಂಜೀವಿನಿ, ಪುಣೆ ವಿ.ವಿ.(ಪ್ರ), ಮಂಜು ಯಾದವ್, ಪಂಜಾಬಿ ವಿ.ವಿ.(ದ್ವಿ),ರೋಹಿನಿ ರೌಟ್,ನಾಗಪುರ ವಿ.ವಿ.(ತೃ).
ಜವಲಿನ್ ತ್ರೋ-ಪೂನಮ್ ಚೌಧರಿ, ದೇವಿಲಾಲ್ ವಿ.ವಿ.(ಪ್ರ), ರಶ್ಮಿ ಕೆ. ಮಂಗಳೂರು ವಿ.ವಿ.(ದ್ವಿ), ನವಗಿರೆ ಕಿರಣ್, ಪುಣೆ ವಿ.ವಿ.(ತೃ).
400ಮೀ.- ಅನಿಲ್ಡಾ ಥೋಮಸ್, ಕೊಟ್ಟಾಯಂ ಎಂ.ಜಿ.ವಿ.ವಿ( ಪ್ರ), ಅನು.ಆರ್,ಕೊಟ್ಟಾಯಂ ಎಂ.ಜಿ.ವಿ.ವಿ(ದ್ವಿ), ಗಯಕ್‍ವಾಡ್ ಸರಿತಾ, ವೀರ್ ನರ್ಮದ್ ಸೌತ್ ಗುಜರಾತ್ ವಿ.ವಿ(ತೃ).
ಪುರುಷರ ವಿಭಾಗ-
ಲಾಂಗ್ ಜಂಪ್-ಮಹಕ್‍ಪ್ರೀತ್ ಸಿಂಗ್, ಪಟಿಯಾಲ ಪಂಜಾಬಿ ವಿ.ವಿ( ಪ್ರ), ಸಂಶೀರ್.ಎಸ್.ಐ, ಮಂಗಳೂರು.ವಿ.ವಿ(ದ್ವಿ), ಬ್ರಿಟ್.ಕೆ.ದೇವಸ್ಸಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿ.ವಿ(ತೃ).
400ಮೀ. ಲಲಿತ್ ಮಥೂರ್, ದೆಹಲಿ ವಿ.ವಿ(ಪ್ರ), ಮಹಮ್ಮದ್ ಅನಸ್.ವೈ ಕ್ಯಾಲಿಕಟ್ ವಿ.ವಿ(ದ್ವಿ), ಆರ್.ಮೋಹನ್ ಕುಮಾರ್, ಮದ್ರಾಸ್.ವಿ.ವಿ(ತೃ)
ಜವಲಿನ್ ತ್ರೋ-ಅಶೀಶ್ ಸಿಂಗ್,ಫೌಝಾಬಾದ್ ವಿ.ವಿ(ಪ್ರ), ಜನ್ಸೂರ್ ಸಿಂಗ್,ಅಮೃತಸರ ವಿ.ವಿ(ದ್ವಿ), ಫರ್ವಿಂದೆರ್, ಕುಮಾರ್,ಪಟಿಯಾಲ ಪಂಜಾಬಿ(ತೃ)
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ,ಕರ್ನಾಟಕ ಸರಕಾರ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ 75 ನೇ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮೂರನೇ ದಿನದ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾನಿಲಯ ಮುಂಚೂಣಿಯ ಪಥದಲ್ಲಿ ನಡೆಯುತ್ತಿದೆ.
ಡೆಕಾತ್ಲಾನ್-ಅಂಕಿತ್ ಶೈನಿ, ರೋಹ್ನಟಕ್ ಎಂ.ಡಿ(ಪ್ರ), ಸುರೇಂದೆರ್ ಕುಮಾರ್, ಮೋಹಾನ್ ಲಾಲ್ ವಿ.ವಿ(ದ್ವಿ), ಚಿರಂಜೀವಿ, ಗ್ವಾಲಿಯರ್.ವಿ.ವಿ(ತೃ)

 

 

 

 

By suddi9

Leave a Reply

Your email address will not be published. Required fields are marked *