ಬಂಟ್ವಾಳ : ಇಸ್ರೇಲ್ ದೇಶದಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಅಲ್ಲಿನ ಸರಕಾರ ತನ್ನ ಕರ್ತವ್ಯವೆಂದು ಭಾವಿಸಿದೆ. 2060ನೇ ಇಸವಿ ಹೊತ್ತಿಗೆ ಭಾರತದ 60ಶೇಕಡಾರಷ್ಟು ಹಿರಿಯ ನಾಗರಿಕರ ಸಂಖ್ಯೆ ಇರಬಹುದೆಂದು ಒಂದು ಅಂದಾಜು . ಈಗಾಗಲೇ ಚೀನಾ ಈ ಸ್ಥಿತಿಯನ್ನು ಎದುರಿಸುತ್ತದೆ. ನ್ಯಾಯಾಂಗದಲ್ಲಿರುವ ಪ್ರಕರಣಗಳ ಒತ್ತಡದಿಂದಾಗಿ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಸರಿಯಾಗಿ ಗಮನ ನೀಡಲಾಗುತ್ತಿಲ್ಲ ಅಂತಹ ಪ್ರಕರಣಗಳನ್ನು ಶೀಘ್ರವಾಗಿ ಒಂದು ವರ್ಷದ ಒಳಗೆ ವಿಲೇವಾರಿ ಮಾಡಬೇಕೆಂಬ ನಿದರ್ೇಶನವಿದೆ ಎಂದು ಗೌ/ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು .
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬಂಟ್ವಾಳ ಮತ್ತು ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಎಸ್.ಜಿ.ಆರ್.ವೈ ಸಭಾಂಗಣ ತಾಲೂಕು ಪಂಚಾಯತ್ ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡಿದರು .
KAR_0758
ಎಷ್ಟೋ ಹಿರಿಯ ಜೀವಗಳು ಕಷ್ಟ ಪಡುತ್ತಿವೆ . ಸಮಾಜ ಹಿರಿಯರನ್ನು ನೋಡಿಕೊಳ್ಳುತ್ತಿರುವ ಬಗ್ಗೆ ತುಂಬಾ ನೋವನ್ನು ಕೊಡುವಂತಿದೆ. ಎಲ್ಲಾ ಸಂಪತ್ತು ಇದ್ದು ವೃದ್ಧಾಶ್ರಮಗಳಲ್ಲಿ ತಮ್ಮ ಜೀವನದ ಕೊನೆಗಾಲವನ್ನು ಕಳೆಯುವಂತಹ ಸ್ಥಿತಿ ದುಃಖ ತರುವಂತಹದ್ದು ಎಂದು ಗೌ/ಪ್ರ.ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಡಿ.ಆರ್ ನುಡಿದರು . ಇಂದು ತಂದೆಯ ಅನುಭವ ಬೇಡ , ತಂದೆಯ ವೃತ್ತಿ ಬೇಡ ಕೊನೆಗೆ ತಂದೆಯೇ ಬೇಡ ಎಂಬ ಸ್ಥಿತಿ ಇದೆ . ಇಂದಿನ ಹಿರಿಯ ನಾಗರಿಕರ ಬಹು ದೊಡ್ಡ ಸಮಸ್ಯೆ ಒಬ್ಬಂಟಿತನ . ತನ್ನವರಿದ್ದು ಒಟ್ಟಿಗೆ ಇರಲಾಗದ ಅನಿವಾರ್ಯತೆ , ಹಿರಿಯ ನಾಗರಿಕರ ಬದುಕನ್ನು ಸುಗಮಗೊಳಿಸುವ ಹಲವು ಯೋಜನೆಗಳು ಜಾರಿಯಲ್ಲಿವೆ, ಅವರ ರಕ್ಷಣೆಗೆ ಈಗ ಇರುವ ಕಾನೂನುಗಳೇ ಸಮರ್ಥವಾಗಿವೆ . ಸಂವಿದಾನದ ನಿದರ್ೇಶಕ ತತ್ವಗಳಲ್ಲಿ ಹಿರಿಯ ನಾಗರಿಕರ ಹಿತರಕ್ಷಣೆಗೆ ಕಾನೂನು ರಚಿಸಿಕೊಳ್ಳುವ ಅವಕಾಶ ನೀಡಲಾಗಿದೆ . ಹಿಂದೂ ಹಾಗೂ ಮುಸ್ಲಿಂ ವೈಯುಕ್ತಿಕ ಕಾನೂನುಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ ಅವಕಾಶ ಒದಗಿಸಲಾಗಿದೆ . 2007 ರಲ್ಲಿ ಜಾರಿಗೆ ಬಂದ ಕಾನೂನಿನಲ್ಲಿ ತಂದೆ ತಾಯಿಗಳು ಮತ್ತು ಹಿರಿಯ ನಾಗರಿಕರ ರಕ್ಷಣೆಗೆ ಒತ್ತು ನೀಡಲಾಗಿದೆ . ದಿಕ್ಕಿಲ್ಲದ ಹಿರಿಯರ ರಕ್ಷಣೆಗಾಗಿ ಕನಿಷ್ಟ ಪ್ರತಿ ಜಿಲ್ಲೆಗೊಂದರಂತೆ “ಹಿರಿಯರ ನಿಲಯ” ಗಳನ್ನು ಸರಕಾರವೇ ನಿಮರ್ಿಸಬೇಕೆಂಬ ನಿದರ್ೇಶನವಿದೆ ಎಂದು ಸಂಪನ್ಮೂಲ ವ್ಯಕ್ತಿ ವಕೀಲ ಕೆ.ರಮೇಶ್ ಉಪಾದ್ಯಾಯ ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು .
ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು . ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಎನ್.ಕೃಷ್ಣರಾಜ ಶೆಟ್ಟಿ ಸ್ವಾಗತಿಸಿದರು . ಶಾರದಾ ರಾವ್ ವಂದಿಸಿ , ಮಾಹಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು

By suddi9

Leave a Reply

Your email address will not be published. Required fields are marked *