1

2ಬಂಟ್ವಾಳ; ಎಲ್ಲಾ ಹಣಕಾಸು ಸಂಸ್ಥೆಗಳಿಗೆ ದಿನದ 24 ಗಂಟೆಗಳ ಕಾಲ ಭದ್ರತೆಗಾಗಿ ಕಾವಲುಗಾರನನ್ನು ನೇಮಿಸಬೇಕು, ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಎಸ್ ಸೂಚನೆ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ನಡೆದ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬ್ಯಾಂಕ್, ಸಹಕಾರಿ ಸಂಸ್ಥೆ ಹಾಗೂ ಎಟಿಎಂ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಸಂಸ್ಥೆಗಳಲ್ಲಿನ ಚಿಕ್ಕಪುಟ್ಟ ಲೋಪದೋಷಗಳು, ಭದ್ರತಾ ನೂನ್ಯತೆಗಳು ಕಳ್ಳತನಕ್ಕ ಅವಕಾಶಗಳನ್ನು ಮಾಡಿಕೊಡುತ್ತದೆ, ಇದರಿಂದ ಗ್ರಾಹಕರು ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳ ವಿಶ್ವಾಸಕಳೆದುಕೊಳ್ಳುತ್ತಾರೆ ಎಂದರು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನೀಡಿದ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಪಾಲಿಸುವಂತೆ ಅವರು ಸೂಚಿಸಿದರು.

ಸರಿಯಾದ ಭಧ್ರತೆಯುಳ್ಳ ಸುಸಜ್ಜಿತವಾದ ಕಟ್ಟಡದಲ್ಲಿ ಬ್ಯಾಂಕನ್ನು ತೆರೆಯುವುದು. ಮತ್ತು ಬ್ಯಾಂಕಿನ ಬಾಗಿಲು, ಕಿಟಿಕಿ, ಚಾವಣಿಗಳನ್ನು ಭಧ್ರವಾಗಿ ಇಡುವುದು, ನಿಮ್ಮ ಬ್ಯಾಂಕು/ಸಹಕಾರಿಸಂಘಗಳ/ಎ.ಟಿ.ಎಮ್ ನ/ ಹಣಕಾಸು ಸಂಸ್ಥೆಯ ಕಟ್ಟಡದ ಹೆಸರು, ಮಾಲಕರ ಹೆಸರು, ಕಟ್ಟಡದ ಸುತ್ತು ಮುತ್ತಲಿನ ಕಟ್ಟಡದವರ, ಮನೆಯಯವರ, ಹೆಸರು ವಿಳಾಸ, ದೂರವಾಣಿಸಂಖೆ, ಮೊಬೈಲ್ ನಂಬ್ರವನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದು, ಬ್ಯಾಂಕು/ಸಹಕಾರಿಸಂಘಗಳ/ಎ.ಟಿ.ಎಮ್ ನ/ ಹಣಕಾಸು ಸಂಸ್ಥೆಯ ಕಟ್ಟಡದ ಸುತ್ತು ಮುತ್ತಲು ಸರಿಯಾದ ಪ್ರಖರವಾದ ಬೆಳಕಿನ ವ್ಯವಸ್ಥೆಯನ್ನು ಮಾಡುವುದು, ಸರಿಯಾದ ಭಧ್ರತೆಯುಳ್ಳ ಸುಸಜ್ಜಿತವಾದ ಅತ್ಯಾಧುನಿಕ ಲಾಕರ್ ವ್ಯವಸ್ಥೆಯ ಭದ್ರತಾ ಕೊಠಡಿಯನ್ನು ನಿಮರ್ಿಸಿ ವಿಷಯವನ್ನು ಗೌಪ್ಯವಾಗಿಡುವುದು, ಹಣಕಾಸು ಸಂಸ್ಥೆಯ ಒಳಗಡೆ , ಹೊರಗಡೆ ಮತ್ತು ಸುತ್ತು ಮುತ್ತಲು ಹಾಗೂ ಸದ್ರಿ ಕಟ್ಟಡಗಳಿಗೆ ಬಂದು ಹೋಗುವವರು ಕಾಣಿಸುವ ರೀತಿಯಲ್ಲಿ ದಿನದ 24 ಗಂಟೆಯೂ ಚಾಲನೆಯಲ್ಲಿರುವಂತೆ ಸುಸಜ್ಜಿತವಾದ ಸಿಸಿ ಕ್ಯಾಮಾರಾವನ್ನು ಅಳವಡಿಸುವುದು, ಭದ್ರತಾ ಕೊಠಡಿಗೆ, ಲಾಕರ್ ಗೆ ಸೈರನ್ /ಬರ್ಗಲರ್ ಅಲರಾಂನ್ನು ಅಳವಡಿಸುವುದು, ಕಾವಲು ಗಾರರನ್ನು ನೇಮಿಸುವಾಗ ಅವರ ಗುಣನಡತೆ ಮತ್ತು ಬೌತಿಕವಾಗಿ ಸರಿಯಾಗಿ ಧೃಡಕಾಯವಾಗಿದ್ದವರನ್ನು ನೇಮಿಸುವುದು, ಕಾವಲುಗಾರರ ಹೆಸರು, ವಿಳಾಸ ಮತ್ತು ಭಾವಚಿತ್ರವನ್ನು ಹಾಗು ಇತರ ವಿವರವನ್ನು ಪೊಲೀಸ್ ಠಾಣೆಗೆ ನೀಡುವುದು, ಹಣಕಾಸು ಸಂಸ್ಥೆಗೆ ಬರುವ ಸಾರ್ವಜನಿಕರು ಅಥವಾ ಅಪರಿಚಿತರು ಅವರ ಅಥವಾ ಇನ್ನಿತರ ಅಕೌಂಟಿಗೆ ಹಣ ಹಾಕಲು ಬಂದಾಗ ಅವರ ಮೇಲೆ ಸಂಶಯ ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದು, ಅಪರಿಚಿತರು ಬಂಗಾರದ ಒಡವೆಗಳನ್ನು ಅಡವಿಡಲು ಬಂದಾಗ ಅವರ ಸಂಪೂರ್ಣ ವಿವರವನ್ನು ಪಡೆದು (ಆದಾರ್ಕಾಡರ್ು, ಮತದಾರರ ಗುರುತು ಪತ್ರ, ಪಡಿತರ ಚೀಟಿ ಇತ್ಯಾದಿ) ಅವರನ್ನು ವಿಚಾರಿಸಿ ಅಂದರೆ ಸದ್ರಿ ಒಡವೆಗಳು ಅವರದ್ದೇ ಅಥವಾ ಇನ್ನೊಬ್ಬರು ಅಡವಿಡಲು ನೀಡಿದ್ದೇ ಎಂಬುದರ ಹಾಗೂ ಅಡವಿಡಲು ಕಾರಣವನ್ನು ಕೇಳಿ ಸಂಶಯ ಕಂಡು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವುದು. ಸೂಚನೆಗಳನ್ನು ಪಾಲಿಸದೇ ಇದ್ದಲ್ಲಿ ನಡೆಯುವ ಘಟನೆಗಳಿಗೆ ಬ್ಯಾಂಕ್ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸುವುದಾಗಿ ಅವರು ಎಚ್ಚರಿಸಿದರು. ಪ್ರೊಭೆಷನರಿ ಎಎಸ್ಪಿ ಸುಮನ ಬೆಳಗಾಂ ಹಾಜರಿದ್ದರು. ಅಪರಾಧ ವಿಭಾಗದ ಎಸೈ ಚಂದ್ಶೇಖರಯ್ಯ ಸ್ವಾಗತಿಸಿ,ವಂದಿಸಿದರು

By suddi9

Leave a Reply

Your email address will not be published. Required fields are marked *