ಬಂಟ್ವಾಳ:ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸ ರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಅಕ್ರಮ ಜಾನುವಾರು ಸಾಗಾಟ, ಹಿಂದೂ ಯುವತಿಯರ ಅಪಹರಣ, ಮಠ ಮಂದಿರಗಳ ಮೇಲೆ ಹಸ್ತಕ್ಷೇಪ ಹೀಗೆ ಅಲ್ಪಸಂಖ್ಯಾತರನ್ನು ಓಲೈಸಲು ಬಹುಸಂಖ್ಯಾತ ಹಿಂದೂಗಳನ್ನು ದಮನಿಸಲು ಮುಂದಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.

DSC_0245 29btl-protest
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಕ್ಷೇತ್ರ ಬಿಜೆಪಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆ ವತಿಯಿಂದ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ 16ರಂದು ಪುತ್ತೂರಿನಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ ಬಳಿಕ ಕರಾಯ ಮಸೀದಿ ಬಳಿ ನಡೆದ ಕಲ್ಲು ತೂರಾಟ ಪ್ರಕರಣ ಮತ್ತು ಪ್ರಚೋದನಕಾರಿ ಭಾಷಣ ನೆಪದಲ್ಲಿ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಇಲ್ಲಿನ ಕಾಂಗ್ರೆಸ್ ಧುರೀಣರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಜಿಲ್ಲಾ ಬಜರಂಗದಳ ಸಂಚಾಲಕ ಜಿತೇಂದ್ರ ಎಸ್. ಕೊಟ್ಟಾರಿ ಮಾತನಾಡಿ, ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಇಲ್ಲಿನ ಸಚಿವರು ಮತ್ತು ಕೆಲವೊಂದು ಶಾಸಕರು ಕೂಡಾ ಪೊಲೀಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಬಿಜೆಪಿ ಮಹಿಳಾ ಮೋಚರ್ಾ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಕ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ಹಿಂಜಾವೇ ವಿಭಾಗ ಸಂಚಾಲಕ ರವಿರಾಜ ಬಿ.ಸಿ.ರೋಡ್, ತಾಲೂಕು ಸಂಚಾಲಕ ಚಂದ್ರ ಕಲಾಯಿ, ಬಜರಂಗದಳ ಸಂಚಾಲಕ ಗುರುರಾಜ್, ದಾಮೋದರ ನೆತ್ರಕೆರೆ, ಎಬಿವಿಪಿ ಮುಖಂಡ ಪ್ರಣಾಮ್ ಮತ್ತಿತರರು ಮಾತನಾಡಿದರು.
ಬಂಟ್ವಾಳ ವಿಎಚ್ಪಿ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಪುರಸಭಾ ಸದಸ್ಯ ಬಿ. ದೇವದಾಸ ಶೆಟ್ಟಿ ವಂದಿಸಿದರು.

By suddi9

Leave a Reply

Your email address will not be published. Required fields are marked *