ಸುದ್ದಿ9 ಮೂಡುಬಿದಿರೆ : ಆಳ್ವಾಸ್ ಪ.ಪೂ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ಪಿಸಿಎಂಬಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊರ್ವ ಫೆ.8ರಿಂದ ಮೂಡುಬಿದಿರೆಯಿಂದ ನಾಪತ್ತೆಯಾಗಿದ್ದಾನೆ.
ಮೂಲತ: ಗಂಗಾವತಿಯ ಎನ್. ರಮೇಶ್ ಎಂಬವರ ಪುತ್ರ ಎನ್. ಲಕ್ಷ್ಮೀ ಪನೀಂದ್ರ (16ವ) ನಾಪತ್ತೆಯಾದ ವಿದ್ಯಾರ್ಥಿ. ಈತ ಆಳ್ವಾಸ್ ಕಾಲೇಜಿನ ನೀಲಗಿರಿ ಹಾಸ್ಟೆಲ್‍ನಿಂದ ರಿಂಗ್ ವರ್ಮ್ ಚಿಕಿತ್ಸೆಗೆಂದು ಫೆ.8ರ ಮಧ್ಯಾಹ್ನ ಹೊರಗಡೆ ಹೋದವನು ಮತ್ತೆ ಹಿಂತಿರುಗಿ ಹಾಸ್ಟೆಲ್‍ಗೆ ಬಂದಿಲ್ಲ ಅಲ್ಲದೆ ತನ್ನ ಊರಿಗೂ ಹೋಗದೆ ನಾಪತ್ತೆಯಾಗಿದ್ದಾನೆ.
ಈತ ನಾಲ್ಕು ಪಠ್ಯ ವಿಷಯಗಳಲ್ಲಿ ಅನುತ್ತೀರ್ಣಗೊಂಡಿರುವುದರಿಂದ ಬೇಸರಗೊಂಡು ನಾಪತ್ತೆಯಾಗಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಈತನ ನಾಪತ್ತೆಯ ಬಗ್ಗೆ ತಂದೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *